ಈ ಭಾರತೀಯ ಬ್ಯಾಂಕರ್ ಜಗತ್ತಿನಲ್ಲೇ ಅತ್ಯುತ್ತಮ ಬ್ಯಾಂಕರ್: 'ದಿ ಇಕಾನಮಿಸ್ಟ್'

Update: 2020-11-03 10:49 GMT
ಆದಿತ್ಯ ಪುರಿ

ಹೊಸದಿಲ್ಲಿ : ಜಗತ್ತಿನ ಅತ್ಯುತ್ತಮ ಬ್ಯಾಂಕರ್ ಯಾರು ಎಂಬ ಪ್ರಶ್ನೆಗೆ ಹೆಚ್ಚಿನವರು ತಲೆ ಕೆರೆದುಕೊಳ್ಳಬಹುದು. ದೊಡ್ಡ ವೇತನ ಪಡೆಯುವವರನ್ನು ಪರಿಗಣಿಸಿದರೆ ವಾಲ್ ಸ್ಟ್ರೀಟಿನ ದೊಡ್ಡ  ಬ್ಯಾಂಕುಗಳಲ್ಲಿ ಯಾರಿಗಾದರೂ ಈ ಪಟ್ಟ ಹೋಗಬಹುದು, ಪ್ರಭಾವವನ್ನು ಪರಿಗಣಿಸಿದರೆ ಚೀನಾದ  ಬ್ಯಾಂಕುಗಳವರಿಗೆ ಈ ಸ್ಥಾನ ಹೋದರೆ, ಅದೇ ಸಮಯ ಅತ್ಯಂತ ಕಠಿಣ ಮಾನದಂಡ- ಏನೂ ಇಲ್ಲದೆ ಏನಾದರೂ ಸಾಧನೆ ಮಾಡಿ ತೋರಿಸಿದವರು, ಷೇರುದಾರರಿಗೆ ದೀರ್ಘಾವಧಿ ಲಾಭದ ಜತೆಗೆ ಆರ್ಥಿಕತೆಗೂ ಸಹಕಾರಿಯಾಗುವ ಕ್ರಮ ಕೈಗೊಂಡವರು ಎಂಬ ಮಾನದಂಡವನ್ನು ಪರಿಗಣಿಸಿದರೆ, ಈ ಅತ್ಯುನ್ನತ ಬ್ಯಾಂಕರ್ ಪಟ್ಟಕ್ಕೆ ಎಚ್‍ಡಿಎಫ್‍ಸಿ ಬ್ಯಾಂಕ್‍ನ ಮಾಜಿ ಸಿಇಒ ಆದಿತ್ಯ ಪುರಿ ಅವರು  ಅರ್ಹರಾಗುತ್ತಾರೆ ಎಂದು ಪ್ರತಿಷ್ಠಿತ ಪತ್ರಿಕೆ 'The Economist' ಬರೆದಿದೆ.

1994ರಲ್ಲಿ ಆರಂಭಗೊಂಡ ಎಚ್‍ಡಿಎಫ್‍ಸಿ ಬ್ಯಾಂಕ್ ಈಗ ಜಗತ್ತಿನ ಮೌಲ್ಯಯುತ ಬ್ಯಾಂಕ್ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದು ಒಟ್ಟು 90 ಬಿಲಿಯನ್ ಡಾಲರ್ ಮೌಲ್ಯದ ಈ ಬ್ಯಾಂಕ್ ಸಿಟಿಬ್ಯಾಂಕ್ ಹಾಗೂ ಎಚ್‍ಎಸ್‍ಬಿಸಿ ಬ್ಯಾಂಕ್ ಅನ್ನೂ ಹಿಂದಿಕ್ಕಿದೆ.

ಪುರಿ ಅವರ ಆಡಳಿತಾವಧಿಯಲ್ಲಿ ಬ್ಯಾಂಕಿನ ಷೇರುದಾರರಿಗೆ ದೊರೆತ ಲಾಭ ಹಾಗೂ  ಇದೇ ಅವಧಿಯಲ್ಲಿ ಜಗತ್ತಿನ ಅತ್ಯುನ್ನತ  50 ಬ್ಯಾಂಕುಗಳ ಸಿಇಒಗಳ ನಿರ್ವಹಣೆಯನ್ನು ಪರಿಗಣಿಸಿ ಪುರಿ ಅವರು ಅತ್ಯುತ್ತಮ ಬ್ಯಾಂಕರ್ ಎಂಬ ನಿರ್ಧಾರಕ್ಕೆ 'ದಿ ಇಕಾನಮಿಸ್ಟ್' ಬಂದಿದೆ.

ಪುರಿ ಅವರ ಯಶಸ್ಸಿಗೆ ಅವರ ಸ್ಪಷ್ಟ ದೂರದೃಷ್ಟಿ, ಪ್ರತಿಯೊಂದು ವಿಚಾರವನ್ನೂ ಕೂಲಂಕಷ ಪರಿಶೀಲನೆ ಮಾಡುವ ಅವರ ಗುಣ, ನೇರ ನಡೆನುಡಿ ಹಾಗೂ ಪ್ರತಿಭಾನ್ವಿತರನ್ನು ಸೇವೆಯಲ್ಲಿ ಉಳಿಸಿಕೊಳ್ಳುವ ನೈಪುಣ್ಯತೆ ಕಾರಣ ಎಂದು ದಿ ಇಕಾನಮಿಸ್ಟ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News