ಮನೆಗೆ ಬೆಂಕಿ ಬಿದ್ದಾಗ ಮಾಲಕನನ್ನು ರಕ್ಷಿಸಿದ ಗಿಳಿ
Update: 2020-11-04 22:02 IST
ಬ್ರಿಸ್ಬೇನ್ (ಆಸ್ಟ್ರೇಲಿಯ), ನ. 4: ಆಸ್ಟ್ರೇಲಿಯದಲ್ಲಿ ನಿದ್ರಿಸುತ್ತಿದ್ದ ವ್ಯಕ್ತಿಯೊಬ್ಬರ ಮನೆಗೆ ಬೆಂಕಿ ಬಿದ್ದಾಗ ಅವರ ಸಾಕು ಗಿಳಿಯು ಅವರನ್ನು ರಕ್ಷಿಸಿದ ಘಟನೆಯೊಂದು ವರದಿಯಾಗಿದೆ.
ಬ್ರಿಸ್ಬೇನ್ ನಿವಾಸಿ ಆ್ಯಂಟನ್ ನಗುಯೆನ್ ಬುಧವಾರ ಗಾಢ ನಿದ್ರೆಯಲ್ಲಿದ್ದಾಗ ಅವರ ಮನೆಗೆ ಬೆಂಕಿ ಬಿತ್ತು ಎಂದು ಬಿಬಿಸಿ ವರದಿ ಮಾಡಿದೆ.
ಅದೃಷ್ಟವಶಾತ್ ಹೊಗೆ ಪತ್ತೆಹಚ್ಚುವ ಸಾಧನವು ಜಾಗೃತಗೊಳ್ಳುವ ಮೊದಲೇ, ಅವರ ಸಾಕು ಗಿಳಿಯು ಬೊಬ್ಬೆ ಹೊಡೆಯಿತು. ಹಾಗಾಗಿ, ಮನೆಯಿಂದ ಸುರಕ್ಷಿತವಾಗಿ ಹೊರಗೆ ಹೋಗಲು ಅವರಿಗೆ ಸಾಕಷ್ಟು ಸಮಯ ಲಭಿಸಿತು.
ಗಿಳಿಯ ಬೊಬ್ಬೆ ಕೇಳಿ ಎದ್ದ ಅವರು ಬೆಂಕಿಯನ್ನು ಕಂಡು ಗಿಳಿಯನ್ನು ಹಿಡಿದುಕೊಂಡು ಹೊರಗೆ ಧಾವಿಸಿದರು.