ಉದ್ಧವ್ ಠಾಕ್ರೆ, ಪುತ್ರನ ವಿರುದ್ಧ ಅವಮಾನಕಾರಿ ಪೋಸ್ಟ್‌ಗಳಿಗಾಗಿ ಎಫ್‌ಐಆರ್‌ಗಳು ದಾಖಲು

Update: 2020-11-04 17:03 GMT

ಮುಂಬೈ,ನ.4: ಕಳೆದ ಜೂನ್‌ನಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಆದಿತ್ಯ ಠಾಕ್ರೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಮಾನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದ ವ್ಯಕ್ತಿಗಳ ವಿರುದ್ಧ ಮಹಾರಾಷ್ಟ್ರ ಪೊಲೀಸರು ಕನಿಷ್ಠ 10 ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡಿದ್ದಾರೆ. ಎಫ್‌ಐಆರ್‌ಗಳಲ್ಲಿ ಹೆಸರಿಸಲಾಗಿರುವ ನಾಲ್ವರನ್ನು ಈಗಾಗಲೇ ಬಂಧಿಸಿರುವ ಪೊಲೀಸರು ಇತರರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಜಪೂತ್ ಸಾವಿನ ಬಳಿಕ ಶಿವಸೇನೆ ನೇತೃತ್ವದ ಸರಕಾರದ ವಿರುದ್ಧ ಸಂಘಟಿತ ದಾಳಿಗಳನ್ನು ನಡೆಸಲಾಗಿತ್ತು ಎಂದು ಆರೋಪಿಸಲಾಗಿದೆ.

ಬೇಬಿ ಪೆಂಗ್ವಿನ್,ಜಸ್ಟೀಸ್ ಫಾರ್ ಎಸ್‌ಎಸ್‌ಆರ್ ಮತ್ತು ಪರಮಬೀರ್ ಸಿಂಗ್ ರಿಸೈನ್‌ನಂತಹ ಹ್ಯಾಷ್‌ಟ್ಯಾಗ್‌ಗಳ ಕುರಿತು ಸೈಬರ್ ಮತ್ತು ವಿಧಿವಿಜ್ಞಾನ ತಜ್ಞರು ನಡೆಸಿದ ತನಿಖೆಯಿಂದ ಖಾತೆಗಳನ್ನು ಇತ್ತೀಚಿಗೆ ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ ಎಂದು ಮುಂಬೈ ಪೊಲೀಸರು ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದ್ದರು.

ಬಂಧಿತರಲ್ಲಿ ಕೆಲವರು ಹಲವಾರು ಎಫ್‌ಐಆರ್‌ಗಳನ್ನು ಎದುರಿಸುತ್ತಿದ್ದು,ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವವರು ಅಥವಾ ಅದರ ಬಗ್ಗೆ ಒಲವು ಹೊಂದಿದವರಾಗಿದ್ದಾರೆ ಎಂದು ಗುರುತಿಸಲಾಗಿದೆ. ಶಿವಸೇನೆಯ ಕಾನೂನು ಕೋಶದ ಸದಸ್ಯರಾಗಿರುವ ವಕೀಲ ಧರಮ್ ಮಿಶ್ರಾ ಅವರು ಈ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News