×
Ad

‘ವಂದೇ ಭಾರತ್ ಅಭಿಯಾನ’ದಲ್ಲಿ ವಿದೇಶದಿಂದ ಹಿಂದಿರುಗಿದ್ದ ಭಾರತೀಯರು ಎಷ್ಟು ಗೊತ್ತೇ ?

Update: 2020-11-05 21:17 IST

ಹೊಸದಿಲ್ಲಿ, ನ. 5: ವಂದೇ ಮಾತರಂ ಅಭಿಯಾನದದ ಅಡಿಯಲ್ಲಿ ಇದುವರೆಗೆ ವಿದೇಶಗಳಲ್ಲಿ ಸಿಲುಕಿಕೊಂಡಿದ್ದ 29.23 ಲಕ್ಷಕ್ಕೂ ಅಧಿಕ ಜನರು ಭಾರತಕ್ಕೆ ಹಿಂದಿರುಗಿದ್ದರು ಹಾಗೂ ಅವರ ಅಂತಾರಾಷ್ಟ್ರೀಯ ಪ್ರಯಾಣದ ಅವಶ್ಯಕತೆಗಳನ್ನು ಸುಗಮಗೊಳಿಸಲಾಗಿತ್ತು ಎಂದು ಕೇಂದ್ರ ನಾಗರಿಕ ವಿಮಾನ ಯಾನ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಗುರುವಾರ ಹೇಳಿದ್ದಾರೆ.

ಪುರಿ ಅವರು ಟ್ಟಿಟರ್‌ನಲ್ಲಿ ಹಂಚಿಕೊಂಡ ದತ್ತಾಂಶದಲ್ಲಿ ನವೆಂಬರ್ 4ರಂದು ಶಾರ್ಜಾ, ಲಂಡನ್, ಫ್ರಾಂಕ್‌ಫರ್ಟ್‌ನಂತಹ ವಿವಿಧ ಸ್ಥಳಗಳಿಂದ 5,362 ಭಾರತೀಯರು ಭಾರತಕ್ಕೆ ಹಿಂದಿರುಗಿರುವುದನ್ನು ತೋರಿಸಿದೆ. ಈ ಅಭಿಯಾನದ ಯಶಸ್ಸಿಗೆ ಕಾರಣರಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಹಾಗೂ ಖಾಸಗಿ ವಿಮಾನ ಯಾನ ಸಂಸ್ಥೆಗಳ ಜಂಟಿ ಪ್ರಯತ್ನವನ್ನು ಅವರು ಪ್ರಶಂಸಿಸಿದ್ದಾರೆ.

‘‘ನಮ್ಮ ಪ್ರಜೆಗಳ ಅವಶ್ಯಕತೆಯನ್ನು ನಾವು ಒಂದು ಗಂಟೆಯಲ್ಲಿ ವಂದೇ ಮಾತರಂ ಅಭಿಯಾನದ ಮೂಲಕ ಪೂರೈಸಿದ್ದೆವು. ವಿದೇಶಗಳಲ್ಲಿ ಸಿಲುಕಿಕೊಂಡ 29.23 ಲಕ್ಷ ಜನರನ್ನು ಭಾರತಕ್ಕೆ ವಾಪಸು ಕರೆ ತಂದೆವು ಹಾಗೂ ಅವರ ಅಂತಾರಾಷ್ಟ್ರೀಯ ಪ್ರಯಾಣವನ್ನು ಸುಗಮಗೊಳಿಸಿದೆವು’’ ಎಂದು ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News