ವಿಶೇಷ ಚೇತನರ ಮನೆಗೆ ಸೋಲಾರ್ ಬೆಳಕು

Update: 2020-11-05 17:16 GMT

ಮುಡಿಪು, ನ.5: ಬಾಳೆಪುಣಿ ಗ್ರಾಪಂ ವ್ಯಾಪ್ತಿಯ ಕುಕ್ಕುದಕಟ್ಟೆ ವಿಶೇಷ ಚೇತನ ಹಿರಿಯ ನಾಗರಿಕ ಜೋಸೆಫ್ ತೆಲೀಸ್ ಅವರ ಮನೆಗೆ ಸೋಲಾರ್ ಗ್ರಾಮ ಅಭಿಯಾನದಡಿ ದಾನಿಗಳ ನೆರನಿಂದ 12 ಸಾವಿರ ರೂ.ವೆಚ್ಚದಲ್ಲಿ ಸೋಲಾರ್ ಹೋಮ್ ಲೈಟಿಂಗ್ ಸಿಸ್ಟಮ್ ಅಳವಡಿಸಲಾಯಿತು.

ಜನ ಶಿಕ್ಷಣ ಟ್ರಸ್ಟ್, ಸೆಲ್ಕೋ ಫೌಂಡೇಶನ್, ಗ್ರಾಪಂ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದ ಸೋಲಾರ್ ಮಾದರಿ ಗ್ರಾಮ ಅಭಿಯಾನ ದಡಿ ಪ್ರತಿ ಮನೆಗಳಿಗೆ ಸೋಲಾರ್ ವಿದ್ಯುತ್ ದೀಪಗಳನ್ನು ಜೀವನೋಪಾಯ ಚಟುವಟಿಕೆಗಳಿಗೆ ಸೋಲಾರ್ ಸಿಸ್ಟಮ್ ಅಳವಡಿಸಲಾ ಗುತ್ತಿದ್ದು, ಅದರಂತೆ ವಿಶೇಷ ಚೇತನ ಹಿರಿಯ ನಾಗರಿಕ ಜೋಸೆಫ್ ತೆಲೀಸ್‌ರ ಮನೆಗೆ ಜನ ಶಿಕ್ಷಣ ಟ್ರಸ್ಟ್, ಸೆಲ್ಕೋ ಫೌಂಡೇಶನ್, ಪ್ರಗತಿಪರ ಕೃಷಿಕ ರೋಶನ್ ಡಿಸೋಜ ನಟ್ಟಿತ್ತಿಲು ಕನ್‌ಸ್ಟ್ರಕ್ಷನ್ ಮಾಲಕ ಅರುಣ್ ಡಿಸೋಜ ಅವರ ನೆರನಿಂದ ಅಳವಡಿಸಿದ ಸೋಲಾರ್ ಹೋಮ್ ಸಿಸ್ಟ್‌ಮ್‌ಗೆ ಮುಡಿಪು ಚರ್ಚ್‌ನ ಧರ್ಮಗುರು ಫಾ.ಸಿರಿಲ್ ಲೋಬೋ ಚಾಲನೆ ನೀಡಿದರು.

ಮಾಜಿ ಓಂಬುಡ್ಸ್‌ಮೆನ್ ಶೀನಶೆಟ್ಟಿ, ತಾಪಂ ಸದಸ್ಯ ಹೈದರ್ ಕೈರಂಗಳ, ಪಿಡಿಒ ಸುನೀಲ್ ಕುಮಾರ್, ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಸೆಲ್ಕೋದ ರವೀನಾ, ಮಾದರಿ ಗ್ರಾಮ ಅಭಿಯಾನದ ಸ್ವಯಂ ಸೇವಕರಾದ ಸದಾನಂದ ಇಸ್ಮಾಯೀಲ್, ಚೇತನ್ ಕುಮಾರ್ ಮತ್ತಿತ್ತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News