ಮ.ಪ್ರ. ಗಣಿಯಲ್ಲಿ 30 ಲಕ್ಷ ರೂ. ವಜ್ರ ಪತ್ತೆ; ಒಂದೇ ದಿನದಲ್ಲಿ ಧನಿಕನಾದ ಯುವಕ

Update: 2020-11-06 15:55 GMT
ಸಾಂದರ್ಭಿಕ ಚಿತ್ರ

ಪನ್ನಾ (ಮ.ಪ್ರ.), ನ.6: ಮಧ್ಯಪ್ರದೇಶದ ಪನ್ನಾ ಸಮೀಪದ ಗಣಿಯೊಂದರ ಸಮೀಪ 24 ವರ್ಷದ ಯುವಕನೊಬ್ಬನಿಗೆ 30 ಲಕ್ಷ ರೂ. ಮೌಲ್ಯದ 6.92 ಕ್ಯಾರೆಟ್‌ನ ವಜ್ರವೊಂದು ದೊರೆತಿದ್ದು, ಆತ ದಿನಬೆಳಗಾಗುವುದರೊಳಗೆ ಧನಿಕನಾಗಿಬಿಟ್ಟಿದ್ದಾನೆ.

ಪೊಲೀಸ್ ಉದ್ಯೋಗಾಕಾಂಕ್ಷಿಯಾದ ಸಂದೀಪ್ ಯಾದವ್ ಎಂಬಾತ ಈ ಅದೃಷ್ಟವಂತ ಯುವಕ. ಕೊರೋನ ಹಾವಳಿಯ ಹಿನ್ನೆಲೆಯಲ್ಲಿ ಲಾಕ್‌ಡೌನ್ ಹೇರಿದ ಹಿನ್ನೆಲೆಯಲ್ಲಿ ಪೊಲೀಸ್ ನೇಮಕಾತಿಯನ್ನು ಮುಂದೂಡಲಾಗಿತ್ತು. ಈ ಸಮಯದಲ್ಲಿ ಆತ ಗಣಿಯೊಂದನ್ನು ಭೋಗ್ಯ (ಲೀಸ್)ಗೆ ಪಡೆದುಕೊಂಡಿದ್ದ.

ಯಾದವ್‌ಗೆ ದೊರೆತ ಈ ಅಮೂಲ್ಯ ವಜ್ರಕ್ಕೆ ಮಾರುಕಟ್ಟೆಯಲ್ಲಿ 30 ಲಕ್ಷ ರೂ. ಬೆಲೆ ದೊರೆತಿದೆ ಎಂದು ಸ್ಥಳೀಯ ವಜ್ರ ನಿರೀಕ್ಷಕ ಅನುಪಮ್ ಸಿಂಗ್ ತಿಳಿಸಿದ್ದಾರೆ.

ಮಧ್ಯಪ್ರದೇಶದ ಬುಂದೇಲ್‌ಖಂಡ ಪ್ರಾಂತವು ಹಿಂದುಳಿದ ಜಿಲ್ಲೆಯಾದರೂ, ಅದು ವಜ್ರದ ಗಣಿಗಾರಿೆಕೆಗೆ ಪ್ರಸಿದ್ಧವಾಗಿದೆ. ಕೃಷ್ಣ ಕಲ್ಯಾಣ್‌ಪುರ ಪ್ರದೇಶದ ಗಣಿಯೊಂದರಿಂದ ಬುಧವಾರ ಯಾದವ್‌ಗೆ ವಜ್ರವು ದೊರೆತಿರುವುದಾಗಿ ಅನುಪಮ್‌ಸಿಂಗ್ ಮಾಹಿತಿ ನೀಡಿದ್ದಾರೆ.

ಸಂದೀಪ್ ಯಾದವ್ ಕಳೆದ 30 ದಿನಗಳಲ್ಲಿ ಬುಂದೇಲ್‌ಖಂಡ ಜಿಲ್ಲೆಯಲ್ಲಿ ವಜ್ರದಿಂದಾಗಿ ದಿಢೀರ್ ಶ್ರೀಮಂತನಾದ ನಾಲ್ಕವೇ ವ್ಯಕ್ತಿಯಾಗಿದ್ದಾನೆ. ಈ ಅವಧಿಯಲ್ಲಿ ಲಭ್ಯವಾದ ಎಲ್ಲಾ ನಾಲ್ಕು ವಜ್ರಗಳು ಒಟ್ಟಾರೆಯಾಗಿ29.82 ಕೆ.ಜಿ. ಭಾರವಿದೆಯೆಂದು ಅನುಪಮ್ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News