ಬಿಹಾರ: ಸ್ವತಂತ್ರ ಅಭ್ಯರ್ಥಿಗೆ ಗುಂಡು ಹಾರಿಸಿದ ದುಷ್ಕರ್ಮಿಗಳು
Update: 2020-11-06 22:28 IST
ದರ್ಭಾಂಗ್, ನ. 6: ಬಿಹಾರ ಚುನಾವಣೆಯ ಮೂರನೇ ಹಂತದ ಮತದಾನದ ಮುನ್ನಾ ದಿನವಾದ ಗುರುವಾರ ಥಾಥೋಪರ್ ಪ್ರದೇಶದ ದರ್ಭಾಂಗ್‌ನಲ್ಲಿ ಹಯಾಘಾಟ್‌ನ ಸ್ವತಂತ್ರ ಅಭ್ಯರ್ಥಿ ರವೀಂದ್ರ ನಾಥ್ ಸಿಂಗ್‌ಗೆ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಂಗ್ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತು.
243 ಸದಸ್ಯ ಬಲದ ಬಿಹಾರದ ವಿಧಾನ ಸಭೆಯ 78 ಸ್ಥಾನಗಳಿಗೆ ನವೆಂಬರ್ 7ರಂದು ಮೂರನೆಯ ಹಾಗೂ ಕೊನೆಯ ಹಂತದ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರ ಗುರುವಾರ ಸಂಜೆ ಕೊನೆಗೊಂಡಿತು.
ಮತದಾನ ನವೆಂಬರ್ 7ರಂದು ನಡೆಯಲಿದೆ. ಮತ ಎಣಿಕೆ ನವೆಂಬರ್ 10ರಂದು ನಡೆಯಲಿದೆ.