×
Ad

ಬಾಂಬೆ ಹೈಕೋರ್ಟ್‌ಗೆ ಎರಡು ವಾರ ದೀಪಾವಳಿ ರಜೆ

Update: 2020-11-07 22:41 IST

ಮುಂಬೈ: ಬಾಂಬೆ ಹೈಕೋರ್ಟ್‌ನಲ್ಲಿ ನವೆಂಬರ್ 8ರಿಂದ ನವೆಂಬರ್ 22ರ ತನಕ ಎರಡು ವಾರ ದೀಪಾವಳಿ ರಜೆ ಇರಲಿದ್ದು, ಈ ಅವಧಿಯಲ್ಲಿ ರಜಾಕಾಲದ ಪೀಠಗಳು ಅತ್ಯಂತ ತುರ್ತು ವಿಚಾರಗಳಿಗೆ ಸಂಬಂಧಿಸಿ ಭೌತಿಕ ವಿಚಾರಣೆಗಳನ್ನು ನಡೆಸಲಿವೆ.

ಅಧಿಕೃತ ನೋಟಿಸ್‌ಗಳ ಪ್ರಕಾರ, ಎರಡು ವಾರ ರಜೆಯ ವೇಳೆ ಮೊದಲ ವಾರ ಎರಡು ವಿಭಾಗೀಯ ಪೀಠಗಳು ಹಾಗೂ ಎರಡು ಏಕ ಸದಸ್ಯ ಪೀಠ ವಿಚಾರಣೆ ನಡೆಸಿದರೆ, ಎರಡನೇ ವಾರ ಒಂದು ವಿಭಾಗೀಯ ಪೀಠ ಹಾಗೂ ಎರಡು ಏಕಸದಸ್ಯ ಪೀಠಗಳು ಕಾರ್ಯನಿರ್ವಹಿಸಲಿವೆ.

ರಜಾಕಾಲದಲ್ಲಿ ನಡೆಯುವ ವಿಚಾರಣೆಗಳಿಗೆ ಬಾಂಬೆ ಹೈಕೋರ್ಟ್ ತನ್ನ ನೋಟಿಸ್‌ನಲ್ಲಿ ಮಾರ್ಗಸೂಚಿಗಳನ್ನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News