×
Ad

ಟ್ರಂಪ್ ಎರಡನೆ ಅವಧಿಗೆ ಪುನರಾಯ್ಕೆಯಾಗದ ಅಮೆರಿಕದ 11ನೇ ಅಧ್ಯಕ್ಷ

Update: 2020-11-08 20:53 IST

 ವಾಶಿಂಗ್ಟನ್,ನ.8: ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲೇ ಎರಡನೆ ಅವಧಿಗೆ ಪುನರಾಯ್ಕೆಯಾಗಲು ವಿಫಲರಾದ 11ನೇ ಅಧ್ಯಕ್ಷರಾಗಿದ್ದಾರೆ.

 ವಾಟರ್‌ಗೇಟ್ ಹಗರಣದ ಹಿನ್ನೆಲೆಯಲ್ಲಿ ರಿಚರ್ಡ್ ನಿಕ್ಸನ್ ರಾಜೀನಾಮೆ ನೀಡಿ ಬಳಿಕ ಅಮೆರಿಕದ ಅಧ್ಯಕ್ಷ ಹುದ್ದೆಗೇರಿದ ಜೆರಾಲ್ಡ್ ಫೋರ್ಡ್ 1976ರಲ್ಲಿ ನಡೆದ ಚುನಾವಣೆ ಯಲ್ಲಿ ಪರಾಭವಗೊಂಡಿದ್ದರು. 1992ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲನುಭವಿಸಿದ ಜಾರ್ಜ್ ಡಬ್ಲ್ಯು. ಬುಶ್, ಪುನಾರಾಯ್ಕೆಯಾಗಲು ವಿಫಲರಾದ ಕೊನೆಯ ಅಮೆರಿಕ ಅಧ್ಯಕ್ಷರಾಗಿದ್ದಾರೆ.

1888ರ ಚುನಾವಣೆಯಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಗ್ರೋವರ್ ಕ್ಲೀವ್‌ಲ್ಯಾಂಡ್ ಸೋತಿದ್ದರು. ಆದರೆ ನಾಲ್ಕು ವರ್ಷಗಳ ಬಳಿಕ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಆಗಿನ ಅಧ್ಯಕ್ಷ ಬೆಂಜಮಿನ್ ಫ್ರಾಂಕ್ಲಿನ್ ಅವರನ್ನು ಸೋಲಿಸಿ, ಮತ್ತೆ ಅಧ್ಯಕ್ಷ ಪಟ್ಟವನ್ನು ಅಲಂಕರಿ ಸಿದ್ದರು. ಸತತವಾಗಿ ಎರಡು ಅವಧಿಗೆ ಆಯ್ಕೆಯಾಗದಿದ್ದರೂ, ಎರಡು ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ಏಕೈಕ ಅಮೆರಿಕನ್ ಅಧ್ಯಕ್ಷರೆಂಬ ದಾಖಲೆಯನ್ನು ಗ್ರೋವರ್ ಸ್ಥಾಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News