ನ.9ರಂದು ದಾರುಲ್ ಮುಸ್ತಫಾದಲ್ಲಿ ಡಿಜಿಟಲ್ ಸ್ಟುಡಿಯೋ ಉದ್ಘಾಟನೆ, ಗ್ರಂಥ ಬಿಡುಗಡೆ

Update: 2020-11-08 16:14 GMT

ಬಂಟ್ವಾಳ: ದಾರುಲ್ ಮುಸ್ತಫಾ ಮೋರಲ್ ಅಕಾಡಮಿ ನೆಚ್ಚಬೆಟ್ಟು ಇದರ ವತಿಯಿಂದ 'ಎಮ್ ಮೀಡಿಯಾ ಡಿಜಿಟಲ್ ಸ್ಟುಡಿಯೋ' ಉದ್ಘಾಟನೆ ಮತ್ತು ತೋಕೆ ಉಸ್ತಾದರು ರಚಿಸಿದ ಅತ್ತಫ್ ಹೀಂ ಲಿ ಮಸಾಇಲಿತ್ತಹ್ಕೀಮ (ತಹ್ಕೀಂ ಕುರಿತಾದ ಅರಬಿ ಗ್ರಂಥ) ಬಿಡುಗಡೆ ಕಾರ್ಯಕ್ರಮ ಸೋಮವಾರ ( ನ.9) ಬೆಳಗ್ಗೆ ನಡೆಯಲಿದೆ.

ಸಂಸ್ಥೆಯ ಮುಖ್ಯಸ್ಥ ಟಿ.ಯಂ. ಮುಹ್ಯಿದ್ದೀನ್ ಕಾಮಿಲ್ ಸಖಾಫಿ, ತೋಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಅಸ್ಸಯ್ಯಿದ್ ಶಿಹಾಬುದ್ದೀನ್ ಮಶ್ ಹೂರ್ ತಂಙಳ್ ತಲಕ್ಕಿ ಉದ್ಘಾಟನೆ ನೆರವೇರಿಸಲಿದ್ದು, ಎಸ್.ಪಿ ಹಂಝ ಸಖಾಫಿ, ಉಸ್ಮಾನ್ ಸಅದಿ ಪಟ್ಟೋರಿ, ಜಿ.ಎಂ ಮುಹಮ್ಮದ್ ಕಾಮಿಲ್ ಸಖಾಫಿ, ಉಮರ್ ಸಖಾಫಿ,ಕಂಬಳಬೆಟ್ಟು, ಡಾ.ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಹನೀಫ್ ಹಾಜಿ ಉಳ್ಳಾಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News