×
Ad

ಸಂಪಾದಕನ ವಿರುದ್ಧದ ದೇಶದ್ರೋಹ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

Update: 2020-11-09 18:10 IST

 ಹೊಸದಿಲ್ಲಿ : ಗುಜರಾತ್ ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕವನ್ನು ಸಮರ್ಪಕವಾಗಿ ನಿರ್ವಹಿಸದೇ ಇರುವುದರಿಂದ ಬಿಜೆಪಿ ನಾಯಕತ್ವವು ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಸ್ಥಾನಕ್ಕೆ ಬೇರೊಬ್ಬರನ್ನು ನೇಮಿಸುವ ಕುರಿತಂತೆ ಯೋಚಿಸುತ್ತಿದೆ ಎಂದು ವರದಿ ಪ್ರಕಟಿಸಿದ್ದ ‘ಫೇಸ್ ಆಫ್ ನೇಷನ್’ಪತ್ರಿಕೆಯ ಸಂಪಾದಕ ಮತ್ತು ಮಾಲಕ ಧವಳ್ ಪಟೇಲ್ ವಿರುದ್ಧ  ದಾಖಲಾಗಿರುವ ದೇಶದ್ರೋಹ ಪ್ರಕರಣವನ್ನು ಗುಜರಾತ್ ಹೈಕೋರ್ಟ್ ಪ್ರಶ್ನಿಸಿದೆ. ಧವಳ್ ಅವರು ''ಈ ನಿಂದನಾತ್ಮಕ ಲೇಖನಕ್ಕಾಗಿ'' ಬೇಷರತ್ ಕ್ಷಮೆ ಯಾಚಿಸಿದ ನಂತರ ಅವರ ವಿರುದ್ಧದ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿದೆ.

ರೂಪಾನಿ ಸ್ಥಾನಕ್ಕೆ  ಬಿಜೆಪಿಯು ಕೇಂದ್ರ ಸಚಿವ ಹಾಗೂ ಗುಜರಾತ್‍ನ ರಾಜ್ಯಸಭಾ ಸಂಸದ ಮನ್ಸುಖ್ ಮಾಂಡವಿಯ ಅವರನ್ನು ನೇಮಿಸಬಹುದು ಎಂದು ‘ಫೇಸ್ ಆಫ್ ನೇಷನ್’ ತನ್ನ ಲೇಖನದಲ್ಲಿ   ಪ್ರಕಟಿಸಿತ್ತು. ಈ ವರದಿಯ ಆಧಾರದಲ್ಲಿ ಗುಜರಾತ್‍ನ ಹಲವು ಸ್ಥಳೀಯ ದೈನಿಕಗಳು  ಇದೇ ಸುದ್ದಿಯನ್ನು ಪ್ರಕಟಿಸಿದ ನಂತರ ಮಾಂಡವಿಯ ಅದನ್ನು ಅಲ್ಲಗಳೆದು ಸ್ಪಷ್ಟೀಕರಣ ನೀಡಿದ್ದರು.

ಧವಳ್ ಅವರನ್ನು ನಂತರ ಬಂಧಿಸಲಾಗಿತ್ತಾದರೂ ಅವರಿಗೆ ಮೇ 27ರಂದು ಹೈಕೋರ್ಟ್ ಜಾಮೀನು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News