ಮುಂಬೈ:ದೀಪಾವಳಿಗೆ ಮುನ್ನ ಪಟಾಕಿಗಳ ಬಳಕೆಗೆ ನಿಷೇಧ

Update: 2020-11-09 17:59 GMT

ಮುಂಬೈ,ನ.9: ದೀಪಾವಳಿಗೆ ಮುನ್ನ ಪಟಾಕಿಗಳ ಬಳಕೆ ಮತ್ತು ಸಿಡಿಮದ್ದು ಪ್ರದರ್ಶನಗಳನ್ನು ನಿಷೇಧಿಸಿ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಯು ಆದೇಶಿಸಿದ್ದು,ಇದು ತಕ್ಷಣದಿಂದಲೇ ಜಾರಿಗೊಂಡಿದೆ. ಕೊರೋನ ವೈರಸ್ ಹರಡುವಿಕೆಯನ್ನು ತಡೆಯಲು ಈ ಕ್ರಮವು ಅಗತ್ಯವಾಗಿದೆ ಎಂದು ಅದು ಹೇಳಿದೆ.ಆದರೆ ಲಕ್ಷ್ಮೀಪೂಜೆಯ ದಿನ (ನ.14) ಜನರು ತಮ್ಮ ಆವರಣಗಳಲ್ಲಿ ‘ಅನಾರ್’ ಮತ್ತು ‘ಫುಲ್ಜಡಿ’ಯಂತಹ ಸೌಮ್ಯ ಪಟಾಕಿಗಳನ್ನು ಬಳಸಲು ಅದು ಅನುಮತಿಯನ್ನು ನೀಡಿದೆ.

ಹೋಟೆಲ್‌ಗಳು,ಕ್ಲಬ್‌ಗಳು,ಜಿಮಖಾನಾಗಳು,ಸಂಸ್ಥೆಗಳು ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ಪಟಾಕಿಗಳನ್ನು ಹಚ್ಚುವಂತಿಲ್ಲ,ಸಿಡಿಮದ್ದುಗಳ ಪ್ರದರ್ಶನವನ್ನೂ ಸಂಘಟಿಸುವಂತಿಲ್ಲ ಎಂದು ಬಿಎಂಸಿ ತನ್ನ ಆದೇಶದಲ್ಲಿ ತಿಳಿಸಿದೆ.

ಕೊರೋನ ವೈರಸ್‌ನ ಸಂಭಾವ್ಯ ಎರಡನೇ ಅಲೆಯಿಂದ ಮುಂಬೈ ಮಹಾನಗರವನ್ನು ರಕ್ಷಿಸಲು ಈ ವರ್ಷ ಪಟಾಕಿಮುಕ್ತಿ ದೀಪಾವಳಿಯನ್ನು ಆಚರಿಸೋಣ ಎಂದು ಬಿಎಂಸಿ ಆಯುಕ್ತ ಇಕ್ಬಾಲ್ ಸಿಂಗ್ ಚಹಲ್ ಹೇಳಿದ್ದಾರೆ.

ಕೋವಿಡ್-19 ರೋಗಿಗಳು ಉಸಿರಾಟ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಮತ್ತು ಅವರ ಆಮ್ಲಜನಕ ಮಟ್ಟ ಕುಸಿಯಬಹುದು. ಈ ಹಿನ್ನೆಲೆಯಲ್ಲಿ ಪಟಾಕಿಯ ಹೊಗೆಯಿಂದ ಅವರು ನರಳುವಂತಾಗುತ್ತದೆ. ಹೀಗಾಗಿ ಕೋವಿಡ್-19 ರೋಗಿಗಳಿಗೆ ಯಾವುದೇ ತೊಂದರೆಯನ್ನು ನಿವಾರಿಸಲು ನಿಷೇಧವನ್ನು ಜಾರಿಗೊಳಿಸಲಾಗುತ್ತಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News