ದಾರುಲ್ ಮುಸ್ತಫಾದಲ್ಲಿ ಎಮ್ ಮೀಡಿಯಾ ಡಿಜಿಟಲ್ ಸ್ಟೂಡಿಯೊ ಲೋಕಾರ್ಪಣೆ

Update: 2020-11-10 03:17 GMT

ಬಂಟ್ವಾಳ, ನ9:ದಾರುಲ್ ಮುಸ್ತಫಾ ಮೋರಲ್ ಅಖಾಡಮಿ ನಚ್ಚಬೆಟ್ಟು ಇದರ ವತಿಯಿಂದ ಎಮ್ ಮೀಡಿಯಾ ಡಿಜಿಟಲ್ ಸ್ಟೂಡಿಯೋ  ಉದ್ಘಾಟನೆ ಹಾಗೂ ತೋಕೆ ಉಸ್ತಾದರು ರಚಿಸಿದ ಅತ್ತಫ್ ಹೀಂ ಲಿ ಮಸಾಇಲಿತ್ತಹ್ಕೀಂ ಎಂಬ ಅರಬಿಕ್ ಗ್ರಂಥ  ಬಿಡುಗಡೆ ಕಾರ್ಯಕ್ರಮ ಸಂಸ್ಥೆಯ ಮುಖ್ಯಸ್ಥ ಟಿ.ಎಂ ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ ತೋಕೆ ಇವರ  ಅಧ್ಯಕ್ಷತೆಯಲ್ಲಿ ನಡೆಯಿತು.

ಎಮ್ ಮೀಡಿಯಾ ಡಿಜಿಟಲ್ ಸ್ಟೂಡಿಯೋ ಇದನ್ನು ಉದ್ಘಾಟಿಸಿ ಅಸ್ಸಯ್ಯಿದ್ ಶಿಹಾಬುದ್ದೀನ್ ಮಶ್ ಹೂರ್ ತಂಙಳ್ ತಲಕ್ಕಿ ಮಾತನಾಡಿದರು.

ದಾರುಲ್ ಮುಸ್ತಫಾ ಸಂಸ್ಥೆಯು ಹೊಸತಾಗಿ ಪ್ರಾರಂಭಿಸಿದ ಎಮ್ ಮೀಡಿಯಾ ಮೂಲಕ ದೈನಂದಿನವಾಗಿ ಇಸ್ಲಾಮಿಕ್, ಆರೋಗ್ಯಕರ ಚರ್ಚೆ, ಮುಖಾಮುಖಿ, ಆದರ್ಶ ಸಂವಾದ ಮುಂತಾದವುಗಳು ನಡೆಯಲಿದೆ ಎಂದು ಸಂಸ್ಥೆಯ ಸಾರಥಿ ತೋಕೆ ಉಸ್ತಾದ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಜಿ.ಎಂ ಸಖಾಫಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಮ್ಮೆಸ್ಸೆಮ್ ಝೈನಿ ಕಾಮಿಲ್, ಉಮರ್ ಸಖಾಫಿ ಕಂಬಳಬೆಟ್ಟು, ಅಶ್ರಫ್ ಕಿನಾರ ಮುಂತಾದವರು ಮಾತನಾಡಿ ಶುಭ ಹಾರೈಸಿದರು. ತೋಕೆ ಉಸ್ತಾದರು ರಚಿಸಿದ ಅತ್ತಫ್ ಹೀಂ ಲಿ ಮಸಾಇಲಿತ್ತಹ್ಕೀಂ ಎಂಬ ಅರಬಿಕ್ ಗ್ರಂಥ ವನ್ನು ಅಸ್ಸಯ್ಯಿದ್ ಶಿಹಾಬುದ್ದೀನ್ ಮಶ್ ಹೂರ್ ತಂಙಳ್ ತಲಕ್ಕಿ ಬಿಡುಗಡೆ ಮಾಡಿದರು.

ಇದೇ ಸಂಧರ್ಭ ಸಂಸ್ಥೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸುಲ್ತಾನಿಯ್ಯ ಅರಬಿಕ್ ಕಾಲೇಜಿನಲ್ಲಿ ಕಳೆದ ವರ್ಷ ಕಲಿತು ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ‘ಸುಲ್ತಾನಿ’ ಬಿರುದು ನೀಡುವುದಾಗಿ ಘೋಷಣೆ ಮಾಡಲಾಯಿತು. ಕಾರ್ಯಕ್ರಮವನ್ನು ಬಶೀರ್ ಅಹ್ಸನಿ ತೋಡಾರ್ ಸ್ವಾಗತಿಸಿ, ಮಹ್ ರೂಫ್ ಆತೂರು ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News