ವಂಡ್ಸೆ ಗ್ರಾಪಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

Update: 2020-11-10 15:54 GMT

ಕೊಲ್ಲೂರು, ನ.10: ವಂಡ್ಸೆ ಮಾರ್ಕೆಟ್ ರಸ್ತೆಯ ಹಳೆ ಪಶು ಚಿಕಿತ್ಸಾಲಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ವಂಡ್ಸೆ ಗ್ರಾಪಂಗೆ ಸಂಬಂಧಿಸಿದ ಸ್ವಾವಲಂಬನ ಮಹಿಳಾ ಹೊಲಿಗೆ ವೃತ್ತಿ ಮತ್ತು ತರಬೇತಿ ಕೇಂದ್ರದಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಗ್ರಾಪಂ ಆಡಳಿತಾಧಿಕಾರಿ, ಪಿಡಿಓ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ದರೋಡೆ ಮಾಡಿರುವುದಾಗಿ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಮೇಲ್ವಿಚಾರಕಿ ಮಹಾಲಕ್ಷ್ಮೀ ನೀಡಿದ ನ್ಯಾಯಾಲಯದ ಖಾಸಗಿ ದೂರಿನಂತೆ ಗ್ರಾಪಂ ಆಡಳಿತಾಧಿಕಾರಿ ಅಂಜನಾದೇವಿ(48), ಪಿಡಿಓ ರೂಪ ಗೋಪಿ(40), ಕಾರ್ಯದರ್ಶಿ ಶಂಕರ ಆಚಾರ್ಯ(46), ಬಿಲ್ ಕಲೆಕ್ಟರ್ ನಾಗರಾಜ(36), ಸಿಬ್ಬಂದಿಗಳಾದ ಅಶ್ವಿನಿ(26), ಕೇಶವ ಶೆಟ್ಟಿಗಾರ್(58) ಹಾಗೂ ಇತರ 20 ಮಂದಿ ಸೇರಿಕೊಂಡು ಈ ಕೃತ್ಯ ಎಸಗಿರುವುದಾಗಿ ಹೇಳ ಲಾಗಿದೆ.

ಅ.9ರಂದು ಗ್ರಾಪಂಗೆ ಸಂಬಂಧಿಸಿದವರು ನೋಟೀಸ್ ನೀಡಿ ಸಂಸ್ಥೆಯನ್ನು ಬಿಟ್ಟು ಹೋಗುವಂತೆ ತಿಳಿಸಿದ್ದರು. ಅ.10ರಂದು ಬೆಳಗ್ಗೆ ಬಂದು ನೋಡಿ ದಾಗ ಸಂಸ್ಥೆಗೆ ಹಾಕಿರುವ ಬೀಗ ಬದಲಾಯಿಸಿ ಸಂಸ್ಥೆಯ ಬೋರ್ಡ್ ತೆಗೆದು, ಒಳಗಡೆ ಇದ್ದ ಒಟ್ಟು 1,20,000 ರೂ. ಮೌಲ್ಯದ ಸೊತ್ತು ಗಳನ್ನು ದರೋಡೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News