ಭಾರತದಲ್ಲಿ 50,000ಕ್ಕಿಂತ ಕೆಳಗಿಳಿದ ಕೊರೋನ ಸೋಂಕಿನ ಹೊಸ ಪ್ರಕರಣ

Update: 2020-11-10 17:16 GMT

ಹೊಸದಿಲ್ಲಿ, ನ.10: ಭಾರತದಲ್ಲಿ ಸತತ ಮೂರನೇ ದಿನವೂ ಕೊರೋನ ಸೋಂಕಿನ ಹೊಸ ಪ್ರಕರಣ 50,000ಕ್ಕಿಂತ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಂಗಳವಾರ ಹೇಳಿದೆ.

ಕೆಲವು ದೇಶಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ದಿನಾ ಸುಮಾರು 1 ಲಕ್ಷ ಹೊಸ ಪ್ರಕರಣ ದಾಖಲಾಗಿರುವುದನ್ನು ಗಮನಿಸಿದರೆ ಭಾರತದಲ್ಲಿ ಹೊಸ ಸೋಂಕಿನ ಪ್ರಮಾಣ ಗಮನಾರ್ಹ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮಂಗಳವಾರ ಬೆಳಗ್ಗಿನವರೆಗಿನ 24 ಗಂಟೆಯ ಅವಧಿಯಲ್ಲಿ ದೇಶದಲ್ಲಿ ದಾಖಲಾದ ಒಟ್ಟು ಸೋಂಕಿನ ಪ್ರಕರಣಗಳಲ್ಲಿ 72ಶೇ. ದಷ್ಟು ಪ್ರಕರಣ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ದಿಲ್ಲಿಯಲ್ಲಿ ದಾಖಲಾಗಿದೆ ಎಂದು ಇಲಾಖೆ ಹೇಳಿದೆ.

ಕಳೆದ ಕೆಲವು ವಾರಗಳಿಂದ ದೇಶದಲ್ಲಿ ಕೊರೋನ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲೂ ನಿರಂತರ ಇಳಿಮುಖವಾಗುತ್ತಿದ್ದು ಈಗ 5,05,265ಕ್ಕೆ ಇಳಿದಿದೆ. ಚೇತರಿಕೆ ಪ್ರಮಾಣ 92.64ಶೇ.ಕ್ಕೆ ಹೆಚ್ಚಿದ್ದು 79,59,406 ಮಂದಿ ಚೇತರಿಸಿಕೊಂಡಿದ್ದಾರೆ. ಅತ್ಯಧಿಕ ಸೋಂಕು ಪ್ರಕರಣ ದಾಖಲಾದ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಪಟ್ಟಿಯಲ್ಲಿ ದಿಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ ಎಂದು ಇಲಾಖೆಯ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News