ಪ್ರವಾದಿ ಜನ್ಮದಿನಾಚರಣೆ ಅಂಗವಾಗಿ ದಾರುನ್ನೂರ್ ಯುಎಇಯಿಂದ ಪ್ರಬಂಧ ಸ್ಪರ್ಧೆ

Update: 2020-11-11 16:15 GMT

ದುಬೈ : ದಾರುನ್ನೂರು ಎಜುಕೇಷನ್ ಸೆಂಟರ್ ಯು ಎ ಇ ಸಮಿತಿ ಇದರ ಪ್ರಾಯೋಜಕತ್ವದಲ್ಲಿ ಪ್ರವಾದಿ ಮುಹಮ್ಮದ್ ( ಸ.ಅ) ಅವರ ಜನ್ಮ ದಿನಾಚರಣೆಯ ಪ್ರಯುಕ್ತ "ಪ್ರವಾದಿಯವರ ಸಾಮಾಜಿಕ ಮತ್ತು ಶೈಕ್ಷಣಿಕ ಕ್ರಾಂತಿ" ಅಥವಾ "Social and Educational Revolution by Prophet Muhammad S.A" ಎಂಬ ವಿಷಯದಲ್ಲಿ  ಅಂತಾರಾಷ್ಟ್ರೀಯ ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ದಾರುನ್ನೂರ್ ಇಂಟರ್ ನ್ಯಾಷನಲ್ ಮಿಲಾದ್ ಫೆಸ್ಟ್ -2020 ಇದರ ಚೇರ್ಮನ್ ಜನಾಬ್ ಅಶ್ರಫ್ ನಖೀಲ್ ಹಾಗು ಪ್ರಧಾನ ಕಾರ್ಯದರ್ಶಿ ಅಶ್ರಫ್ ಬಾಂಬಿಲ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸ್ಪರ್ಧಾರ್ತಿಗಳು  ಪ್ರಬಂಧ  ವಿಷಯವನ್ನು  ಕನ್ನಡ ಅಥವಾ ಇಂಗ್ಲಿಷ್  ಭಾಷೆಗಳಲ್ಲಿ ಬರೆಯಬಹುದಾಗಿದೆ. ಅಕ್ಷರ ಸ್ಪುಟತೆ, ಸ್ಪಷ್ಟತೆ ನಿಖರ ವಾಗಿರಬೇಕು, ಪ್ರಭಂದವು 1500   ಶಬ್ದಗಳಿಂದ ಮೀರಿರಬಾರದು, ಫಲಿತಾಂಶ ಪ್ರಕಟವಾಗುವ ಮುನ್ನ ಯಾವುದೇ ಮಾಧ್ಯಮ / ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಬಾರದು, ನಕಲಿ /ಕೋಪಿ ಪ್ರಬಂಧಗಳನ್ನು ತಿರಸ್ಕರಿಸಲಾಗುವುದು, ಆಯ್ದ ಕೆಲವು ಪ್ರಭಂದಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸಲಾಗುವುದು, ಕೊಟ್ಟ ವಿಷಯಗಳಲ್ಲಿ ಮಾತ್ರ ಪ್ರಬಂಧ ಬರೆಯಲು ಅವಕಾಶವಿರುತ್ತದೆ ಮತ್ತು ಆಸಕ್ತರು ಪ್ರಬಂಧ ಸಲ್ಲಿಸಲು ಕೊನೆಯ ದಿನವಾದ ನವೆಂಬರ್ 25, 2020ರ ಒಳಗಾಗಿ  ತಮ್ಮ  ಹೆಸರು ಮತ್ತು ಸಂಪೂರ್ಣ ವಿಳಾಸದೊಂದಿಗೆ ವಾಟ್ಸ್ ಅಪ್ ನಂಬರ್‌ +971528406433 +971556078894 ಅಥವಾ ಇ ಮೈಲ್ deckuae@gmail.com ಮೂಲಕ ಪ್ರಬಂಧವನ್ನು   ಕಳುಹಿಸಿ ಕೊಟ್ಟು ಸಹಕರಿಸಬೇಕು.

ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ವಯಸ್ಸು ಉದ್ಯೋಗದ ಮಿತಿ ಇರುವುದಿಲ್ಲ, ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕ ಸ್ತ್ರೀ ಮತ್ತು  ಪುರುಷರು  ಭಾಗವಹಿಸಬಹುದಾಗಿದೆ. ವಿಜೇತರ  ಫಲಿತಾಂಶವನ್ನು ಡಿಸೆಂಬರ್ 5 ರಂದು ಪತ್ರಿಕಾ ಮಾಧ್ಯಮಗಳಲ್ಲಿ ಪ್ರಕಟಿಸಲಾಗುವುದು.

ಸ್ವದೇಶಿ ಹಾಗು ಅನಿವಾಸಿ ಭಾರತೀಯರಿಗೆ  ಮುಕ್ತ ಅವಕಾಶ ಕಲ್ಪಿಸಲಾಗಿದ್ದು ಈ ವಿಶಿಷ್ಟ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಸ್ಮರಣಿಕೆ, ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ ಬಹುಮಾನಗಳನ್ನು  ನೀಡಲಾಗುವುದು ಬಳಿಕ  ಐದು ಅಗ್ರ ಸ್ಥಾನಿಗಳಿಗೆ ಸಮಾಧಾನಕರ ಬಹುಮಾನ ಪ್ರಶಸ್ತಿ ಪತ್ರದೊಂದಿಗೆ ನೀಡಲಾಗುವುದು ಎಂದು ದಾರುನ್ನೂರು ಯು ಎ ಇ ಸಮಿತಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ +971565812108, +97155740 8405 ಗೆ ವಾಟ್ಸಪ್ ಮೂಲಕ ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News