10 ಕ್ಷೇತ್ರಗಳಿಗಾಗಿ 2 ಲಕ್ಷ ಕೋಟಿ ರೂ.ಗಳ ಪಿಎಲ್‌ಐ ಯೋಜನೆಗೆ ಕೇಂದ್ರದ ಅಸ್ತು

Update: 2020-11-11 16:58 GMT

ಹೊಸದಿಲ್ಲಿ,ನ.11: ದೇಶೀಯ ತಯಾರಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ 10 ಕ್ಷೇತ್ರಗಳಿಗಾಗಿ ಎರಡು ಲಕ್ಷ ಕೋಟಿ ರೂ.ಗಳ ಉತ್ಪಾದನೆ ಸಂಬಂಧಿತ ಹೂಡಿಕೆ (ಪಿಎಲ್‌ಐ) ಯೋಜನೆಗೆ ಕೇಂದ್ರ ಸಂಪುಟವು ಬುಧವಾರ ಒಪ್ಪಿಗೆಯನ್ನು ನೀಡಿದೆ.

ಸಂಪುಟ ಸಭೆಯ ಬಳಿಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು,10 ಪ್ರಮುಖ ಕ್ಷೇತ್ರಗಳಲ್ಲಿ ದೇಶದ ತಯಾರಿಕೆ ಸಾಮರ್ಥ್ಯಗಳನ್ನು ಮತ್ತು ರಫ್ತು ಪ್ರಮಾಣವನ್ನು ಹೆಚ್ಚಿಸಲು ಪಿಎಲ್‌ಐ ಯೋಜನೆಗೆ ಸಂಪುಟವು ಹಸಿರು ನಿಶಾನೆಯನ್ನು ತೋರಿಸಿದೆ. ಯೋಜನೆಯು ಭಾರತೀಯ ತಯಾರಕರನ್ನು ಜಾಗತಿಕವಾಗಿ ಸ್ಪರ್ಧಾತ್ಮಕಗೊಳಿಸುವ ಜೊತೆಗೆ ಹೂಡಿಕೆಯನ್ನು ಆಕರ್ಷಿಸಲಿದೆ ಮತ್ತು ರಫ್ತನ್ನು ಹೆಚ್ಚಿಸಲಿದೆ ಎಂದು ತಿಳಿಸಿದರು.

ಲಿಥಿಯಂ ಅಯಾನ್‌ನಂತಹ ಅಡ್ವಾನ್ಸ್ ಕೆಮಿಸ್ಟ್ರಿ ಸೆಲ್ ಬ್ಯಾಟರಿ,ವಿದ್ಯುನ್ಮಾನ ಉತ್ಪನ್ನಗಳು,ವಾಹನಗಳು ಮತ್ತು ವಾಹನ ಬಿಡಿಭಾಗಗಳು,ಔಷಧಿ,ದೂರಸಂಪರ್ಕ ಮತ್ತು ನೆಟ್‌ವರ್ಕಿಂಗ್ ಉತ್ಪನ್ನಗಳು, ಜವಳಿ, ಆಹಾರೋತ್ಪನ್ನಗಳು, ಫ್ರಿಝ್ ಮತ್ತು ವಾಷಿಂಗ್ ಮಷಿನ್‌ಗಳಂತಹ ಬೃಹತ್ ವಿದ್ಯುತ್ ಗೃಹೋಪಕರಣಗಳು ಹಾಗೂ ಅಲಾಯ್ ಸ್ಟೀಲ್ ಇವು ನೂತನ ಯೋಜನೆಯು ಅನ್ವಯಗೊಳ್ಳುವ ಕ್ಷೇತ್ರಗಳಲ್ಲಿ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News