ಕಾರ್ಕಳ : ಕೋವಿಡ್ ಜಾಗೃತಿ ಮೂಡಿಸುವ ದೀಪಾವಳಿಯ ಗೂಡುದೀಪಗಳು !

Update: 2020-11-12 13:56 GMT

ಕಾರ್ಕಳ, ನ.12: ದೀಪಾವಳಿಯ ಗೂಡುದೀಪದ ಮೂಲಕ ಕೋವಿಡ್ ಜಾಗೃತಿ ಮೂಡಿಸುವ ಕಾರ್ಕಳ ಪುರಸಭಾ ಸದಸ್ಯ ಶುಭದ ರಾವ್, ಪ್ರಯತ್ನ ಇದೀಗ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಇದೀಗ ಈ ಗೂಡು ದೀಪವು ಉತ್ತಮ ಸಂದೇಶದೊಂದಿಗೆ ನಾಗರಿಕರ ಗಮನವನ್ನು ಸೆಳೆಯುತ್ತಿದೆ.

ದೀಪಾವಳಿಯ ಪ್ರಯುಕ್ತ ತಯಾರಿಸಿರುವ ಸಂಪೂರ್ಣ ಪರಿಸರ ಸ್ನೇಹಿಯಾಗಿ ರುವ ಈ ಗೂಡು ದೀಪದಲ್ಲಿ ಮಾಸ್ಕ್ ಧರಿಸಿ, ಸೆನಿಟೈಸರ್ ಬಳಸಿ, ಹ್ಯಾಂಡ್ ವಾಶ್ ಮತ್ತು ಸುರಕ್ಷಿತ ಅಂತರ ಕಾಪಾಡಿ ಎಂಬ ಚಿತ್ರದೊಂದಿಗೆ ಸಂದೇಶ ಗಳನ್ನು ಬರೆಯಲಾಗಿದೆ. ಈ ಮೂಲಕ ಸಾರ್ವಜನಿಕರಿಗೆ ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ.

‘ಕಳೆದ ಮೂರು ವರ್ಷದಿಂದ ಆನೆಕೆರೆ ಪಾರ್ಕಿನಲ್ಲಿ ಗೂಡುದೀಪ ಸ್ಪರ್ಧೆ ಯನ್ನು ಆಯೋಜಿಸುತ್ತಿದ್ದೆ. ಆದರೆ ಈ ಬಾರಿ ಕೋವಿಡ್ ಕಾರಣದಿಂದ ಸ್ಪರ್ಧೆ ಏರ್ಪಡಿಸಿಲ್ಲ. ಆದರೆ ಗೂಡುದೀಪದಿಂದಲೇ ಏನಾದರೂ ಸಂದೇಶವನ್ನು ಸಾರ್ವಜನಿಕರಿಗೆ ನೀಡಬೇಕೆಂಬ ಸಂಕಲ್ಪದಿಂದ ನಾನೇ ಆಸಕ್ತಿ ಯಿಂದ ಈ ಗೂಡುದೀಪವನ್ನು ರಚಿಸಿದ್ದೇನೆ ಎನ್ನುತ್ತಾರೆ ಪುರಸಭಾ ಸದಸ್ಯ ಶುಭದ ರಾವ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News