​ಮಂಗಳೂರು ವಿವಿ ಪ್ರಾಧ್ಯಾಪಕಿಗೆ ಮಾನಸಿಕ ಕಿರುಕುಳ ಆರೋಪ : ಆಂತರಿಕ ದೂರು ಸಮಿತಿ ಶಿಫಾರಸಿಗೆ ಸಿಂಡಿಕೇಟ್ ಸಭೆ ನಿರ್ಣಯ

Update: 2020-11-12 16:46 GMT

ಮಂಗಳೂರು, ನ.12: ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿಯೊಬ್ಬರಿಗೆ ಸಹೋದ್ಯೋಗಿ ಯಿಂದ ಮಾನಸಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.

ಸಂತ್ರಸ್ತ ಸಹಾಯಕ ಪ್ರಾಧ್ಯಾಪಕಿಯು ಸಲ್ಲಿಸಿದ ದೂರನ್ನು ಆಂತರಿಕ ಸಮಿತಿ ಶಿಫಾರಸು ಮಾಡಲು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸಭೆಯು ಗುರುವಾರ ನಿರ್ಣಯ ಕೈಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮಂಗಳೂರು ವಿವಿಯಲ್ಲಿ ಇತ್ತೀಚೆಗೆ ಸಿಂಡಿಕೇಟ್ ಸಭೆಯಲ್ಲಿ ಚರ್ಚೆಯಾದ ದ್ವಿತೀಯ ಕೇಸು ಇದಾಗಿದ್ದು, ಇದಕ್ಕೂ ಮೊದಲು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣ ಕೇಳಿಬಂದಿತ್ತು.

ಮೊದಲ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋದಲ್ಲಿ ಪ್ರೊ.ಅರಬ್ಬಿ ಅವರನ್ನು ಕೂಡಲೇ ವಜಾಗೊಳಿಸುವ ಬಗ್ಗೆ ಚರ್ಚೆ ನಡೆಸಿತು.

ಈ ಕೇಸಿಗೆ ಸಂಬಂಧಪಟ್ಟಂತೆ ದೂರನ್ನು ಹಿರಿಯ ಅಧಿಕಾರಿಗಳ ಮುಂದೆ ಮಂಡಿಸದ ಆರೋಪಲ್ಲೂ ಈ ಮೊದಲಿನ ಕುಲಸಚಿವ ಪ್ರೊ.ಎ.ಎಂ.ಖಾನ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿವಿಯು ರಾಜ್ಯ ಸರಕಾರಕ್ಕೆ ಈಗಾಗಲೇ ವರದಿ ಕಳುಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News