ಭಾರತೀಯ ಸಾಗರೋತ್ತರ ಕಾಂಗ್ರೆಸ್ ಘಟಕದಿಂದ ಬಹರೈನ್ ಪ್ರಧಾನಿ ನಿಧನಕ್ಕೆ ಸಂತಾಪ

Update: 2020-11-12 17:09 GMT

ಬಹರೈನ್: ಬಹರೈನ್ ನ ದೀರ್ಘಾವಧಿ ಪ್ರಧಾನಿಯಾಗಿದ್ದ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ಅವರ ನಿಧನಕ್ಕೆ ಭಾರತೀಯ ಸಾಗರೋತ್ತರ ಕಾಂಗ್ರೆಸ್ ಬಹರೈನ್ ಘಟಕ ಸಂತಾಪ ಸೂಚಿಸಿದೆ.

ಭಾರತೀಯ ಸಾಗರೋತ್ತರ ಕಾಂಗ್ರೆಸ್ ಘಟಕ ಅಧ್ಯಕ್ಷರಾದ ಮುಹಮ್ಮದ್ ಮನ್ಸೂರ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಇದರ ಹಲವು  ನಾಯಕರಿಂದ ದೂರವಾಣಿ ಕರೆಗಳನ್ನು ಹಾಗೂ ಸಂತಾಪ ಸಂದೇಶಗಳನ್ನು ಸ್ವೀಕರಿಸಿದರು.

ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಟ್ವಿಟರ್ ಮೂಲಕ ಬಹರೈನ್ ದೊರೆ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.  ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷರಾದ ಸ್ಯಾಮ್ ಪಿತ್ರೋಡಾ ಅವರು ಬಹರೈನ್ ದೊರೆಯ ನಿಧನಕ್ಕೆ ಸಂತಾಪ ಸೂಚಿಸಿದರು. ಈ ಇಬ್ಬರೂ ಇತ್ತೀಚೆಗೆ ಬಹರೈನ್ ಸರಕಾರದ ಅತಿಥಿಗಳಾಗಿ ಭೇಟಿ ನೀಡಿದ್ದ ಸಂದರ್ಭದ ನೆನಪುಗಳನ್ನು ಮೆಲುಕು ಹಾಕಿಕೊಂಡರು.

ಸದ್ರಿ ಭೇಟಿಯ ಸಂದರ್ಭ  ಉಭಯ ರಾಷ್ಟ್ರಗಳ ಮಧ್ಯೆ ಕಲೆ, ಕ್ರೀಡೆ ಹಾಗೂ ಸಾಂಸ್ಕೃತಿಕ ರಂಗದಲ್ಲಿ ಪರಸ್ಪರ ಪ್ರಯೋಜನ ಪಡೆಯುವ ವಿಷಯಗಳ ಬಗ್ಗೆ ಚರ್ಚೆಯಾಗಿತ್ತು. ವಾಣಿಜ್ಯ ಸಂಬಂಧಗಳು, ವಿದೇಶಾಂಗ ನೀತಿ ಹಾಗೂ ಸಾಂಸ್ಕೃತಿಕ ವಿನಿಮಯಗಳ ಬಗ್ಗೆ ಬಹರೈನ್ ಹಾಗೂ ಭಾರತ ದೇಶಗಳ ಸಂಬಂಧ ಅತ್ಯಂತ ಸೌಹಾರ್ದಯುತವಾಗಿದೆ. ಬಹರೈನ್ ನಲ್ಲಿ ಸುಮಾರು 3,50,000 ಭಾರತೀಯರು ನೆಲೆಸಿದ್ದು, ಬಹರೈನ್ ನಾಗರೀಕರೊಂದಿಗೆ ತಮ್ಮ ಪರಂಪರಾಗತ ಹಾಗೂ ಅಮೂಲ್ಯ ಬಾಂಧವ್ಯವನ್ನು ಮುಂದುವರಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News