ಪೆರ್ಡೂರು: ಗೂಡ್ಸ್ ವಾಹನ ಅಪಹರಣಕ್ಕೆ ಯತ್ನ: ಆರೋಪಿ ಸೆರೆ

Update: 2020-11-13 15:22 GMT

ಹಿರಿಯಡ್ಕ, ನ. 13: ಪೆರ್ಡೂರು ವಡ್ಡಮೇಶ್ವರ ಎಂಬಲ್ಲಿ ನ.12ರಂದು ಸಂಜೆ ವೇಳೆ ಮಾಲಕರಿಗೆ ಕಲ್ಲಿನಿಂದ ಹೊಡೆದು ಗೂಡ್ಸ್ ವಾಹನವನ್ನು ಅಪಹರಿಸಲು ಯತ್ನಿಸಿದ ಆರೋಪಿಯನ್ನು ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗ ಮೂಲದ ನಿಶಾಂತ್ ಕವಾಡಿ (23) ಬಂಧಿತ ಆರೋಪಿ.

ಈತ ಮೂಡಬಿದ್ರೆಯಿಂದ ಕಳವು ಮಾಡಲಾದ ದ್ವಿಚಕ್ರ ವಾಹನದಲ್ಲಿ ಪೆರ್ಡೂರಿಗೆ ಬಂದಿದ್ದು, ಅಲ್ಲಿ ಬೈಕನ್ನು ಇಟ್ಟು, ಅಲ್ಲೇ ಸಮೀಪ ಇರುವ ಸಂದೀಪ್ ಶೆಣೈ ಎಂಬವರ ಫ್ಯಾಕ್ಟರಿಯಲ್ಲಿ ಗೂಡ್ಸ್ ವಾಹನವನ್ನು ತೊಳೆಯುತ್ತಿದ್ದ ರಮೇಶ ಎಂಬವರ ಮುಖಕ್ಕೆ ಏಕಾಏಕಿ ಕಲ್ಲಿನಿಂದ ಹೊಡೆದ ಎನ್ನಲಾಗಿದೆ.

ಬಳಿಕ ಅವರಿಂದ ವಾಹನದ ಕೀಯನ್ನು ಕಸಿದುಕೊಂಡು, ವಾಹನವನ್ನು ಹೆಬ್ರಿ ಕಡೆಗೆ ಚಲಾಯಿಸಿ ಕೊಂಡು ಹೋದನು. ಕೂಡಲೇ ಇವರು ವಾಹನವನ್ನು ಹಿಂಬಾಳಿಸಿದ್ದು, ಆತನ ಹೆಬ್ರಿಯಿಂದ ಬ್ರಹ್ಮಾವರ ಕಡೆ ವಾಹನವನ್ನು ಚಲಾ ಯಿಸಿಕೊಂಡು ಹೋಗಿದ್ದು, ಆತನನ್ನು ಹಿಂಬಾಲಿಸಿ ಕೊಂಡು ಬಂದವರು, ಕೊಳಲಗಿರಿ ಚರ್ಚ್ ಬಳಿ ಗೂಡ್ಸ್ ವಾಹನದಲ್ಲಿದ್ದ ನಿಶಾಂತ್‌ನನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ವಾಹನ ಸಂಪೂರ್ಣ ಜಖಂಗೊಂಡಿದೆ ಎಂದು ದೂರಲಾಗಿದೆ.

ಪೊಲೀಸರು ಗೂಡ್ಸ್ ವಾಹನ ಮತ್ತು ದ್ವಿಚಕ್ರ ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಯನ್ನು ಸಂಜೆ ನ್ಯಾಯಾಲಯಕ್ಕೆ ಹಾಜರು ಪಡಿಸಿ ಒಂದು ದಿನ ಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News