ಕೊಡಗು:ಎಸ್ಸೆಸ್ಸೆಫ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

Update: 2020-11-13 16:08 GMT

ಸೋಮವಾರಪೇಟೆ  : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್  ಇದರ ಸದಸ್ಯತ್ವ ಅಭಿಯಾನವು ಕರ್ನಾಟಕ ರಾಜ್ಯಾದ್ಯಂತ ನಡೆಯಲಿದ್ದು, ಇಂದು ಕೊಡಗು ಜಿಲ್ಲೆಯ ಹಲವಾರು ಯೂನಿಟ್ ಗಳಲ್ಲಿ ಚಾಲನೆ ನೀಡಲಾಯಿತು.  

'ಹೃದಯವಿದೆಯಾ ಸತ್ಯದ ಧ್ವನಿಯಾಗಲು' ಎಂಬ ಘೋಷವಾಕ್ಯದೊಂದಿಗೆ ನಡೆಯುವ ಸದಸ್ಯತ್ವ ಅಭಿಯಾನದ ಮೆಂಬರ್ಶಿಪ್ ಡೇ ಇಂದು  ಕೊಡಗು ಜಿಲ್ಲೆಯಾದ್ಯಂತ 90ರಷ್ಟು ಯೂನಿಟ್ ಗಳಲ್ಲಿ ನಡೆಯಿತು.

 ಸೋಮವಾರಪೇಟೆಯ ಕರ್ಕಳ್ಳಿ ಶಾಖೆಯಲ್ಲಿ ಜಿಲ್ಲಾಧಕ್ಷರಾದ ಅಝೀಝ್ ಸಖಾಫಿ ಕೊಡ್ಲಿಪೇಟೆಯವರು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಜಿಲ್ಲೆಯಾದ್ಯಂತ ಹಲವಾರು ಯೂನಿಟ್ ಗಳಲ್ಲಿ ಸದಸ್ಯತ್ವ ದಿನ ನಡೆಸಲಾಯಿತು.

ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಇದರ ಸದಸ್ಯತ್ವ ಅಭಿಯಾನವು ನವೆಂಬರ್ 13ರಿಂದ 30ರವೆರೆಗೆ ನಡೆಯಲಿದ್ದು, 12ರಿಂದ 34 ವಯಸ್ಸಿನವೆರೆಗಿನ ಸುನ್ನಿ ಆಶಯಕ್ಕೆ ಬದ್ಧರಾಗಿರುವ ಯುವಕರಿಗೆ ಎಸ್ಸೆಸ್ಸೆಫ್ ಸದಸ್ಯತನ ನೀಡಲಿದೆ ಎಂದು ಎಸ್ಸೆಸ್ಸಫ್ ಕೊಡಗು ಜಿಲ್ಲಾ ಸಮಿತಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News