ಹಿರಿಯ ಬಿಜೆಪಿ ನಾಯಕನ ಪುತ್ರ ಆತ್ಮಹತ್ಯೆ
Update: 2020-11-14 19:47 IST
ಬುಲಂದಶಹರ್,ನ.14: ಜೇವಾರ್‌ನಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಬಿಜೆಪಿ ನಾಯಕ ಹೋರಮ್ ಸಿಂಗ್ ಅವರ ಪುತ್ರ ಮಹೇಶ (30) ಶನಿವಾರ ಬೆಳಿಗ್ಗೆ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಿಗ್ಗೆ ಕೋಣೆಯಿಂದ ಗುಂಡಿನ ಶಬ್ದ ಕೇಳಿಸಿದ್ದು,ಮನೆಮಂದಿ ಧಾವಿಸಿ ನೋಡಿದಾಗ ಮಹೇಶ ಶವವಾಗಿ ಬಿದ್ದಿದ್ದರು ಮತ್ತು ಸಮೀಪದಲ್ಲಿ ಪಿಸ್ತೂಲು ಬಿದ್ದುಕೊಂಡಿತ್ತು.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದು ಆತ್ಮಹತ್ಯೆಯಾಗಿರುವಂತೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದರು.