ಬಿಹಾರ ವಿಧಾನಪರಿಷತ್ ಚುನಾವಣೆ: ಜೆಡಿಯುಗೆ 1 ಸ್ಥಾನ ನಷ್ಟ

Update: 2020-11-14 15:23 GMT

ಪಾಟ್ನ, ನ.14: ಕಳೆದ ತಿಂಗಳು ನಡೆದಿದ್ದ ಬಿಹಾರ ವಿಧಾನಪರಿಷತ್ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಜೆಡಿಯು, ಬಿಜೆಪಿ ಮತ್ತು ಸಿಪಿಐ ತಲಾ 2 ಸ್ಥಾನಗಳಲ್ಲಿ ಜಯ ಗಳಿಸಿದೆ. ಆದರೆ ಜೆಡಿಯು ಹೊಂದಿದ್ದ 1 ಸ್ಥಾನವನ್ನು ಈ ಬಾರಿ ಪಕ್ಷೇತರ ಅಭ್ಯರ್ಥಿ ಸೆಳೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ.

 ಕಾಂಗ್ರೆಸ್ 1 ಸ್ಥಾನದಲ್ಲಿ ಜಯ ಸಾಧಿಸಿದೆ. ಪಾಟ್ನ, ಕೋಶಿ, ದರ್ಭಾಂಗ ಮತ್ತು ತಿರ್ಹಟ್ ಪದವೀಧರ ಕ್ಷೇತ್ರಗಳಿಗೆ, ಪಾಟ್ನ, ದರ್ಭಾಂಗ, ತಿರ್ಹಟ್ ಮತ್ತು ಸರನ್ ಶಿಕ್ಷಕರ ಕ್ಷೇತ್ರಗಳಿಗೆ ಅಕ್ಟೋಬರ್ 22ರಿಂದ ಚುನಾವಣೆ ನಡೆದಿತ್ತು. ಗುರುವಾರ ಆರಂಭವಾದ ಮತ ಎಣಿಕೆ ಶುಕ್ರವಾರ ರಾತ್ರಿ ಮುಗಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜೆಡಿಯು ಅಭ್ಯರ್ಥಿಗಳಾದ ನೀರಜ್ ಕುಮಾರ್, ದೇವೇಶ್‌ಚಂದ್ರ ಠಾಕುರ್, ಬಿಜೆಪಿಯ ಎನ್‌ಕೆ ಯಾದವ್, ನವಲ್‌ಕಿಶೋರ್ , ಸಿಪಿಐಯ ಸಂಜಯ್ ಕುಮಾರ್ ಸಿಂಗ್, ಕೇದಾರನಾಥ್ ಪಾಂಡೆ, ಕಾಂಗ್ರೆಸ್‌ನ ಮದನಮೋಹನ್ ಝಾ ಗೆದ್ದಿದ್ದಾರೆ.

ಜೆಡಿಯು ಈ ಬಾರಿ ದರ್ಬಾಂಗ ಶಿಕ್ಷಕರ ಕ್ಷೇತ್ರವನ್ನು ಕಳೆದುಕೊಂಡಿದ್ದು ಇಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದಾರೆ. ದರ್ಬಾಂಗ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಯು ಪರ ಕಣಕ್ಕಿಳಿದಿದ್ದ ಜೆಡಿಯು ಕಾರ್ಯಾಧ್ಯಕ್ಷ ಅಶೋಕ್ ಚೌಧರಿಯ ನಿಕಟವರ್ತಿ ದಿಲೀಪ್ ಕುಮಾರ್ ಚೌಧರಿ ಅನಿರೀಕ್ಷಿತವಾಗಿ ಸೋತಿದ್ದಾರೆ. ಇದೀಗ ಚೌಧರಿಯನ್ನು ರಾಜ್ಯಪಾಲರ ಕೋಟಾದಡಿ ನಾಮನಿರ್ದೇಶನ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News