ಬೆಂಗಳೂರು: 200 ಕೋಟಿ ಮೌಲ್ಯದ ಜಿಎಸ್‍ ಟಿ ವಂಚನೆ ಪ್ರಕರಣ ಪತ್ತೆ

Update: 2020-11-15 07:06 GMT

ಬೆಂಗಳೂರು: ಕಳೆದ ಕೆಲ ವಾರಗಳಿಂದ ಸುಮಾರು 200 ಕೋಟಿ ರೂಪಾಯಿ ಜಿಎಸ್‍ ಟಿ ತೆರಿಗೆ ವಂಚನೆ ಮಾಡಿದ ಆರೋಪದಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.

ಚೀನಾ ಮೂಲದ ಕಂಪನಿಗಳು ಸೇರಿದಂತೆ ಬಹುರಾಷ್ಟ್ರೀಯ ಕಂಪನಿಗಳಿಗೆ ಸೇವೆ ನೀಡಿದ ನೆಪದಲ್ಲಿ ಸುಮಾರು 1,000 ಕೋಟಿ ರೂಪಾಯಿ ಮೌಲ್ಯದ ನಕಲಿ ಇನ್‍ ವೈಸ್ ‍ಗಳನ್ನು ಸೃಷ್ಟಿಸಲಾಗಿದೆ ಎಂದು ಆಪಾದಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಜಿಎಸ್‍ಟಿ ಗುಪ್ತಚರ ವಿಭಾಗದ ಮಹಾನಿರ್ದೇಶಕ ಕಚೇರಿಯ ಬೆಂಗಳೂರು ವಲಯದಲ್ಲಿ ಪತ್ತೆಯಾದ ಅತಿದೊಡ್ಡ ವಂಚನೆ ಜಾಲ ಇದು ಎನ್ನಲಾಗಿದೆ. ಮುಂಬೈ ಮೂಲದ ಚೀನಿ ಕಂಪನಿಗಳು ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ಮಾಡಿದ್ದಾರೆ. ನಕಲಿ ತೆರಿಗೆ ಕ್ರೆಡಿಟ್‍ ಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು ತೆರಿಗೆ ವಂಚನೆಯ ಪ್ರಮಾಣದ ಬಗ್ಗೆ ಲೆಕ್ಕಾಚಾರ ನಡೆದಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News