ಶೀತಲೀಕೃತ ಬೀಫ್‍, ಹಂದಿ ಮಾಂಸದಲ್ಲಿ ಕೊರೋನ ವೈರಸ್ ಪತ್ತೆ

Update: 2020-11-15 07:49 GMT

ಬೀಜಿಂಗ್: ಬ್ರೆಝಿಲ್, ನ್ಯೂಜಿಲ್ಯಾಂಡ್ ಮತ್ತು ಬೊಲಿವಿಯಾದಿಂದ ಆಮದು ಮಾಡಿಕೊಂಡ ಬೀಫ್ ಮತ್ತು ಹಂದಿಮಾಂಸದಲ್ಲಿ ಮತ್ತು ಪ್ಯಾಕೇಜಿಂಗ್ ವಸ್ತುಗಳಲ್ಲಿ ಕೊರೋನ ವೈರಸ್ ಪತ್ತೆಯಾಗಿದೆ ಎಂದು ಪೂರ್ವ ಚೀನಾದ ಜಿನಾನ್ ನಗರದ ಅಧಿಕಾರಿಗಳು ಹೇಳಿದ್ದಾರೆ.

ಗೋತಾಯ್ ಇಂಟರ್‍ ನ್ಯಾಷನಲ್ ಗ್ರೂಪ್ ಮತ್ತು ಶಾಂಘೈ ಝೋಂಗ್ಲಿ ಡೆವಲಪ್‍ ಮೆಂಟ್ ಟ್ರೇಡ್ ಇದನ್ನು ಆಮದು ಮಾಡಿಕೊಳ್ಳಲಾಗಿತ್ತು ಎಂದು ಜಿನಾನ್ ಮುನ್ಸಿಪಲ್ ಆರೋಗ್ಯ ಸಮಿತಿ ತನ್ನ ವೆಬ್‍ ಸೈಟ್‍ ನಲ್ಲಿ ಹೇಳಿದೆ.

ಶಾಂಘೈನ ಯಾಂಗ್ ‍ಶನ್ ಬಂದರು ಮೂಲಕ ಇದನ್ನು ಆಮದು ಮಾಡಿಕೊಳ್ಳಲಾಗಿದ್ದು, ಇದನ್ನು ಯಾವ ಕಂಪನಿಗಳು ರಫ್ತು ಮಾಡಿವೆ ಎನ್ನುವುದನ್ನು ಬಹಿರಂಗಪಡಿಸಿಲ್ಲ.

7500ಕ್ಕೂ ಅಧಿಕ ಮಂದಿ ಈ ಮಲಿನ ಉತ್ಪನ್ನದ ಜತೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ಇತರ ಸಂಬಂಧಿತ ಸಿಬ್ಬಂದಿಯ ತಪಾಸಣೆ ನಡೆಸಿದಾಗ ಕೋವಿಡ್-19 ನೆಗೆಟಿವ್ ಫಲಿತಾಂಶ ಬಂದಿದೆ ಎಂದು ವಿವರಿಸಿದೆ.

ಕಳೆದ ವಾರ ವೂಹಾನ್‍ ಗೆ ಸೌದಿ ಅರೇಬಿಯಾದಿಂದ ಆಮದು ಮಾಡಿಕೊಂಡ ಬ್ರೆಜಿಲಿಯನ್ ಬೀಫ್‍ ನಲ್ಲಿ ಕೊರೋನಾ ವೈರಸ್ ಪತ್ತೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News