×
Ad

ಜೆಎನ್‌ಯು ಹೆಸರು ಬದಲಿಸಿ ಸ್ವಾಮಿ ವಿವೇಕಾನಂದ ವಿವಿ ಹೆಸರಿಡಿ ಎಂದ ಸಿ.ಟಿ.ರವಿ

Update: 2020-11-17 14:57 IST

ಹೊಸದಿಲ್ಲಿ: ಜವಾಹರಲಾಲ್ ನೆಹರೂ ಯುನಿವರ್ಸಿಟಿ(ಜೆಎನ್‌ಯು)ಯನ್ನು ಸ್ವಾಮಿ ವಿವೇಕಾನಂದ ಯುನಿವರ್ಸಿಟಿ ಎಂದು ಮರು ನಾಮಕರಣ ಮಾಡಬೇಕೆಂದು ಕರೆ ನೀಡಿರುವ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕದ ಮಾಜಿ ಸಚಿವ ಸಿ.ಟಿ.ರವಿ ಹೇಳಿಕೆ ವಿವಾದ ಸೃಷ್ಟಿಸಿದೆ. 

ಸ್ವಾಮಿ ವಿವೇಕಾನಂದರು ಭಾರತದ ಕಲ್ಪನೆಯ ಪರವಾಗಿ ನಿಂತಿದ್ದರು. ಅವರ ತತ್ವ ಹಾಗೂ ಮೌಲ್ಯಗಳು ಭಾರತದ ಸಾಮರ್ಥ್ಯವನ್ನು ಸೂಚಿಸುತ್ತವೆ. ಜವಾಹರಲಾಲ್ ನೆಹರೂ ಯುನಿವರ್ಸಿಟಿಯನ್ನು ಸ್ವಾಮಿ ವಿವೇಕಾನಂದ ಯುನಿವರ್ಸಿಟಿ ಎಂದು ಮರು ನಾಮಕರಣ ಮಾಡುವುದು ಸರಿ. ಭಾರತದ ದೇಶಭಕ್ತ ಸಂತನ ಜೀವನವು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ರವಿ ಪೋಸ್ಟ್ ಮಾಡಿದ್ದರು.

ಕಳೆದ ವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಜೆಎನ್‌ಯು  ಕ್ಯಾಂಪಸ್ ನಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಅನಾವರಣಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News