30 ಸೆಕೆಂಡ್‌ನಲ್ಲಿ ಕೊರೋನ ವೈರಸ್ ಕೊಲ್ಲಬಲ್ಲ ಮೌತ್‌ವಾಶ್: ವರದಿ

Update: 2020-11-17 16:39 GMT

ಲಂಡನ್, ನ. 17: ಅಂಗಡಿಗಳಲ್ಲಿ ವೈದ್ಯರ ಚೀಟಿ ಇಲ್ಲದೆ ಲಭಿಸುವ ಮೌತ್‌ವಾಶ್ (ಬಾಯಿ ಮುಕ್ಕಳಿಸುವ ದ್ರಾವಣ)ಗಳು 30 ಸೆಕೆಂಡ್‌ಗಳಲ್ಲಿ ಕೊರೋನ ವೈರಸನ್ನು ಸಂಪೂರ್ಣವಾಗಿ ಕೊಲ್ಲಬಲ್ಲವು ಎಂದು ಅಧ್ಯಯನವೊಂದು ತಿಳಿಸಿದೆ.

ಕನಿಷ್ಠ 0.07 ಶೇಕಡ ಸೆಟಿಲ್‌ಪೈರೀಡಿನಿಯಂ ಕ್ಲೋರೈಡ್ (ಸಿಪಿಸಿ) ಹೊಂದಿರುವ ಮೌತ್‌ವಾಶ್‌ಗಳು, ಕೊರೋನ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಭರವಸೆಯನ್ನು ಮೂಡಿಸಿವೆ ಎಂದು ಬ್ರಿಟನ್‌ನ ಕಾರ್ಡಿಫ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಹೇಳಿದ್ದಾರೆ.

‘‘ಕೃತಕವಾಗಿ ನಿರ್ಮಿಸಲಾದ ಪರಿಸರದಲ್ಲಿ ನಡೆಸಲಾಗಿರುವ ಈ ಅಧ್ಯಯನವು ಧನಾತ್ಮಕ ಹೆಜ್ಜೆಯಾದರೂ, ಭರವಸೆಯನ್ನು ಮೂಡಿಸಿದೆಯಾದರೂ, ಹೆಚ್ಚಿನ ಕ್ಲಿನಿಕಲ್ ಪರೀಕ್ಷೆ ಈಗ ಅಗತ್ಯವಾಗಿದೆ’’ ಎಂದು ಕಾರ್ಡಿಫ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡೇವಿಡ್ ಥಾಮಸ್ ಹೇಳಿದ್ದಾರೆ ಎಂದು ‘ಇಂಡಿಪೆಂಡೆಂಟ್’ ಪತ್ರಿಕೆ ವರದಿ ಮಾಡಿದೆ.

ಪ್ರೊ. ಡೇವಿಡ್ ಥಾಮಸ್ ನೇತೃತ್ವದಲ್ಲಿ ಕ್ಲಿನಿಕಲ್ ಪರೀಕ್ಷೆ ನಡೆಯುತ್ತಿದೆ.

 ಅಮೆರಿಕದ ಟೆಕ್ಸಾಸ್ ರಾಜ್ಯದ ಫೋರ್ಡ್‌ಹುಡ್‌ನಲ್ಲಿ ನೆಲೆ ಹೊಂದಿರುವ ಫಸ್ಟ್ ಆರ್ಮರ್ಡ್ ಬ್ರಿಗೇಡ್ ಕಾಂಬ್ಯಾಟ್ ತಂಡ ಮತ್ತು ಫಸ್ಟ್ ಕ್ಯಾವಲ್ರಿ ಡಿವಿಶನ್‌ಗೆ ಸೇರಿದ ಯುದ್ಧ ಟ್ಯಾಂಕ್‌ಗಳನ್ನು ಸೋಮವಾರ ಬೆಲ್ಜಿಯಮ್‌ನ ಆ್ಯಂಟ್‌ವೆರ್ಪ್ ಬಂದರಿನಲ್ಲಿ ಇಳಿಸಲಾಯಿತು. ಅಟ್ಲಾಂಟಿಕ್ ರಿಸಾಲ್ವ್ ಯುದ್ಧಾಭ್ಯಾಸಕ್ಕಾಗಿ ಈ ಟ್ಯಾಂಕ್‌ಗಳು ಪೂರ್ವ ಯುರೋಪ್‌ನತ್ತ ತೆರಳುತ್ತಿವೆ. ಅಲ್ಲಿ ಅಮೆರಿಕ ಮತ್ತು ನ್ಯಾಟೊ ಪಡೆಗಳು ಜಂಟಿಯಾಗಿ ಸೇನಾಭ್ಯಾಸ ನಡೆಸಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News