ಎಂಪಿಎಲ್ ಸ್ಪೋರ್ಟ್ಸ್ ಗೆ ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕತ್ವ

Update: 2020-11-17 17:52 GMT

ಹೊಸದಿಲ್ಲಿ, ನ.17: ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ಕ್ರಿಕೆಟ್ ತಂಡ, ಅಂಡರ್-19 ತಂಡದ ಅಧಿಕೃತ ಕಿಟ್ ಪ್ರಾಯೋಜಕತ್ವವನ್ನು ಎಂಪಿಎಲ್ ಸ್ಪೋರ್ಟ್ಸ್ ವಹಿಸಿಕೊಂಡಿದೆ.

ಎಂಪಿಎಲ್ ಸ್ಪೋರ್ಟ್ಸ್ ಇದೇ ವೇಳೆ ವಾಣಿಜ್ಯ ಪಾಲುದಾರರಾಗಿರುತ್ತದೆ. ಭಾರತದ ತಂಡಗಳಿಗೆ ಉಡುಪು ಮತ್ತು ಪರಿಕರಗಳನ್ನು ಒದಗಿಸಲು ನೈಕ್ ಬದಲಿಗೆ ಎಂಪಿಎಲ್ ಸ್ಪೋರ್ಟ್ಸ್ ಪ್ರಾಯೋಜಕತ್ವವನ್ನು ವಹಿಸಿಕೊಂಡಿರುವುದನ್ನು ಬಿಸಿಸಿಐ ಮಂಗಳವಾರ ಔಪಚಾರಿಕವಾಗಿ ಪ್ರಕಟಿಸಿದೆ.

ನೈಕ್ ಸಂಸ್ಥೆ 2016ರಿಂದ 2020ರ ತನಕ ಪ್ರಾಯೋಜಕತ್ವವನ್ನು ವಹಿಸಿಕೊಂಡಿತ್ತು. ಐದು ವರ್ಷಗಳ ಒಪ್ಪಂದದಂತೆ 370 ಕೋಟಿ ರೂ. ಗಳನ್ನು ನೈಕ್ ಸಂಸ್ಥೆ ಪಾವತಿಸಿದೆ. ಈ ಒಪ್ಪಂದವನ್ನು ಬಿಸಿಸಿಐ ಸುಪ್ರೀಂ ಕೌನ್ಸಿಲ್ ನವೆಂಬರ್ 2ರಂದು ತೆರವುಗೊಳಿಸಿತು. ಎಂಪಿಎಲ್ ಸ್ಪೋರ್ಟ್ಸ್ ನವೆಂಬರ್ 2020ರಿಂದ ಡಿಸೆಂಬರ್ 2023 ರವರೆಗೆ ಮೂರು ವರ್ಷಗಳ ಅವಧಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಬಿಸಿಸಿಐ ಜೊತೆ ಎಂಪಿಎಲ್ ಸ್ಪೋರ್ಟ್ಸ್‌ಒಡನಾಟವು ಭಾರತದ-ಆಸ್ಟ್ರೇಲಿಯ ಪ್ರವಾಸ ಸರಣಿಯೊಂದಿಗೆ ಪ್ರಾರಂಭ ವಾಗುತ್ತದೆ. ಒಪ್ಪಂದದ ಭಾಗವಾಗಿ ಎಂಪಿಎಲ್ ಸ್ಪೋರ್ಟ್ಸ್ ವಿನ್ಯಾಸ ಗೊಳಿಸಿದ ಮತ್ತು ತಯಾರಿಸಿದ ಜರ್ಸಿಯನ್ನು ಭಾರತದ ಪುರುಷ, ಮಹಿಳಾ ಮತ್ತು ಅಂಡರ್ -19 ತಂಡಗಳು ಧರಿಸಿ ಆಡಲಿವೆ. ಟೀಮ್ ಇಂಡಿಯಾ ಜರ್ಸಿಗಳಲ್ಲದೆ, ಎಂಪಿಎಲ್ ಸ್ಪೋರ್ಟ್ಸ್ ಪರವಾನಿಗೆ ಪಡೆದ ಟೀಮ್ ಇಂಡಿಯಾ ಸರಕುಗಳನ್ನು ಸಹ ಮಾರಾಟ ಮಾಡಲಿದೆ. ಎಂಪಿಎಲ್ ಸ್ಪೋರ್ಟ್ಸ್ ಜರ್ಸಿ ಮತ್ತು ಅದರ ವ್ಯಾಪಕ ಶ್ರೇಣಿಯ ಟೀಮ್ ಇಂಡಿಯಾ ಸರಕುಗಳನ್ನು ಅಭಿಮಾನಿಗಳಿಗೆ ಕೈಗೆಟುಕುವ ಬೆಲೆಯಲ್ಲಿ ನೀಡಲಿದೆ.

 ನೈಕ್‌ನೊಂದಿಗೆ ನಾಲ್ಕು ವರ್ಷಗಳ ಹಿಂದಿನ ಒಪ್ಪಂದವು ಸೆಪ್ಟಂಬರ್‌ನಲ್ಲಿ ಕೊನೆಗೊಂಡಿತ್ತು.ಎಂಪಿಎಲ್ ಇದೀಗ 2 ಐಪಿಎಲ್ ಫ್ರಾಂಚೈಸಿ ತಂಡಗಳು (ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು), ಸಿಪಿಎಲ್ ತಂಡ ಮತ್ತು ಐರ್‌ಲ್ಯಾಂಡ್ ಮತ್ತು ಯುಎಇ ಕ್ರಿಕೆಟ್ ಮಂಡಳಿಗಳೊಂದಿಗೆ ಸಂಬಂಧ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News