ಡಿ. 14: ಕಾಸರಗೋಡು ಜಿ.ಪಂ. ಚುನಾವಣೆ : ಎಲ್ ಡಿ ಎಫ್ ಅಭ್ಯರ್ಥಿಗಳ ಪಟ್ಟಿ ಅಂತಿಮ

Update: 2020-11-18 04:43 GMT

ಕಾಸರಗೋಡು : ಕಾಸರಗೋಡು ಜಿಲ್ಲಾ ಪಂಚಾಯತ್ ಡಿ. 14ರಂದು ನಡೆಯಲಿರುವ ಚುನಾವಣೆಯಲ್ಲಿ ಎಲ್ ಡಿ ಎಫ್ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದೆ. 

17 ಸ್ಥಾನಗಳ ಪೈಕಿ ಸಿಪಿಐಎಂ ಹತ್ತು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಸಿಪಿಐ 3,  ಕೇರಳ ಕಾಂಗ್ರೆಸ್  ಎಂ, ಎಲ್ ಜೆ ಡಿ,  ಐ ಎನ್ ಎಲ್ ಗೆ ತಲಾ ಒಂದು ಸ್ಥಾನ ನೀಡಲಾಗಿದೆ.  ಹೊಸ ಮುಖಗಳಿಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಚಿತ್ತಾರಿಕಾಲ್ ವಾರ್ಡ್ ನಲ್ಲಿ  ಡಿಡಿಎಫ್ ಪಕ್ಷ ದ ಅಭ್ಯರ್ಥಿಗೆ ಸಿಪಿಎಂ ಬೆಂಬಲ ನೀಡಲಿದೆ.

ಚೆರ್ವತ್ತೂರು ಸಿ. ಜಿ ಸಜಿತ್ , ಮಡಿಕೈ  ಬೇಬಿ ಬಾಲಕೃಷ್ಣನ್ , ಪೆರಿಯ  ಫಾತಿಮತ್  , ಶಂನಾ ,  ದೇಲಂಪಾಡಿ  ಎ . ಪಿ ಕುಶಲ , ಕರಿಂದಲ  ಕೆ. ಶಕುಂತಲಾ, ಕುಂಬಳೆ ಕೆ . ಶಾಲಿನಿ ,  ಮಂಜೇಶ್ವರ ಅಬೂಬಕ್ಕರ್  ಸಾದಿಕ್ ,  ಪುತ್ತಿಗೆ  ಬಿ . ವಿಜಯಕುಮಾರ್ , ಬೇಡಡ್ಕ  ಎಸ್ .ಎನ್  ಸರಿತ್,  ವರ್ಕಾಡಿ ಪುಷ್ಪಾ ಜಯರಾಂ , ಎಡನೀರು  ಸಿ . ಜಾನು , ಉದುಮ ಜಮೀಲಾ  ಟೀಚರ್ ,  ಕಳ್ಳಾರ್  ಸಿನೋಜ್ , ಚಿತ್ತಾರಿಕಾಲ್ ಪಿ . ವೇಣುಗೋಪಾಲ್ ,   ಪಿಲಿಕ್ಕೋಡ್  ಎಂ . ಮಧು ಕಣಕ್ಕಿಲಿಯಲಿರುವರು.   ಚೆಂಗಳ  ಮತ್ತು    ಸ್ಟೇಷನ್  ವಾರ್ಡ್ ಗೆ ಅಭ್ಯರ್ಥಿಗಳನ್ನು ಅಂತಿಮ ಗೊಳಿಸಿಲ್ಲ . 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News