ಈ ರಾಜ್ಯದಲ್ಲಿ ಇನ್ನು ಆನ್‌ಲೈನ್ ಗೇಮಿಂಗ್ ನಿಷೇಧ

Update: 2020-11-21 03:46 GMT

ಚೆನ್ನೈ, ನ.21: ತಮಿಳುನಾಡಿನಲ್ಲಿ ಆನ್‌ಲೈನ್ ಗೇಮಿಂಗ್ ನಿಷೇಧಿಸಿ ರಾಜ್ಯಪಾಲ ಬಲ್ವಾರಿಲಾಲ್ ಪುರೋಹಿತ್ ಶುಕ್ರವಾರ ಸುಗ್ರೀವಾಜ್ಞೆ ಹೊರಡಿಸಿದ್ದಾರೆ. ಇದನ್ನು ಉಲ್ಲಂಘಿಸಿದಲ್ಲಿ 5 ಸಾವಿರ ರೂಪಾಯಿ ದಂಡ ಹಾಗೂ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ಆನ್‌ಲೈನ್ ಗೇಮ್ ವ್ಯಸನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ತಪ್ಪಿಸುವ ಸಲುವಾಗಿ ಮತ್ತು ಆನ್‌ಲೈನ್ ಗೇಮಿಂಗ್ ವ್ಯಸನದಿಂದ ಜನರನ್ನು ರಕ್ಷಿಸುವ ಸಲುವಾಗಿ ಸುಗ್ರೀವಾಜ್ಞೆಗೆ ಸರಕಾರ ಪ್ರಸ್ತಾವ ಸಲ್ಲಿಸಿತ್ತು. ಈ ನಿಟ್ಟಿನಲ್ಲಿ ಗೇಮಿಂಗ್ ಕಾಯ್ದೆ-1930, ಚೆನ್ನೈ ಸಿಟಿ ಪೊಲೀಸ್ ಕಾಯ್ದೆ-1888 ಮತ್ತು ತಮಿಳುನಾಡು ಜಿಲ್ಲಾ ಪೊಲೀಸ್ ಕಾಯ್ದೆ-1859ಕ್ಕೆ ತಿದ್ದುಪಡಿ ತರುವಂತೆ ಕೋರಿತ್ತು.

ಗೇಮಿಂಗ್‌ನಲ್ಲಿ ತೊಡಗಿಸಿಕೊಂಡಿರುವವರನ್ನು ಮಾತ್ರವಲ್ಲದೇ ಗೇಮಿಂಗ್ ಹೌಸ್ ಆರಂಭಿಸುವವರನ್ನೂ ಶಿಕ್ಷೆಗೆ ಗುರಿಪಡಿಸಲು ಸುಗ್ರೀವಾಜ್ಞೆಯಲ್ಲಿ ಅವಕಾಶವಿದೆ. ಇಂಥ ಗೇಮಿಂಗ್ ಗೌಸ್ ಆರಂಭಿಸಿದವರಿಗೆ 10 ಸಾವಿರ ರೂ. ದಂಡ ಹಾಗೂ ಎರಡು ವರ್ಷಗಳ ವರೆಗೂ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಬೆಟ್ಟಿಂಗ್, ವಿಜೇತರಿಗೆ ಬಹುಮಾನ ಮೊತ್ತವನ್ನು ಎಲೆಕ್ಟ್ರಾನಿಕ್ ವಿಧಾನದಲ್ಲಿ ಹಣ ವರ್ಗಾವಣೆಯನ್ನೂ ನಿಷೇಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News