ಸತತ ಮೂರನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

Update: 2020-11-22 07:05 GMT

ಹೊಸದಿಲ್ಲಿ: ತೈಲ ಮಾರುಕಟ್ಟೆ ಕಂಪೆನಿಗಳು ರವಿವಾರ ಸತತ ಮೂರನೇ ದಿನ ದಿಲ್ಲಿ, ಮುಂಬೈ, ಕೋಲ್ಕತಾ ಹಾಗೂ ಚೆನ್ನೈನಂತಹ ನಾಲ್ಕು ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಿವೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಶನ್ ಅಧಿಸೂಚನೆಯೊಂದರಲ್ಲಿ ತಿಳಿಸಿದೆ.

ಪೆಟ್ರೋಲ್‌ನ ಬೆಲೆ ಪ್ರತಿ ಲೀಟರ್‌ಗೆ 8 ಪೈಸೆ, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 18ರಿಂದ 20 ಪೈಸೆ ಹೆಚ್ಚಿಸಲಾಗಿದ್ದು, ದರ ಹೆಚ್ಚಳವು ನವೆಂಬರ್ 22ರ ಬೆಳಗ್ಗೆ ಆರು ಗಂಟೆಗೆ ಜಾರಿಗೆ ಬರಲಿದೆ.

 ಇಂದಿನ ದರ ಏರಿಕೆಯ ಮೂಲಕ ಮೂರು ದಿನಗಳಲ್ಲಿ ಪೆಟ್ರೋಲ್ ಬೆಲೆ ಒಟ್ಟು 40 ಪೈಸೆ ಹಾಗೂ ಡೀಸೆಲ್ ಬೆಲೆ 61 ಪೈಸೆ ಹೆಚ್ಚಳವಾದಂತಾಗಿದೆ.

ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 81.46 ರೂ., ಡೀಸೆಲ್ ಬೆಲೆ 71.07 ರೂ., ಮುಂಬೈನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಕ್ರಮವಾಗಿ ಪ್ರತಿ ಲೀಟರ್‌ಗೆ 88.16 ರೂ. ಹಾಗೂ 77.54 ರೂ.ಗೆ ಪರಿಷ್ಕರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News