ಈ ಪಟ್ಟಣದಲ್ಲಿ ಇನ್ನು ಎರಡು ತಿಂಗಳು ಸೂರ್ಯ ಕಾಣಿಸುವುದಿಲ್ಲ!

Update: 2020-11-22 07:24 GMT
Photo: Twitter (@EdPiotrowski)

ಅಲಕ್ಸಾ: ಅಲಸ್ಕಾದ ಪುಟ್ಟ ಪಟ್ಟಣ ಯುಟ್‍ಕ್ವಿಯಾಗ್ವಿಕ್‍ನಲ್ಲಿ ಇನ್ನು ಎರಡು ತಿಂಗಳ ಕಾಲ ಬಿಸಿಲು ಇರುವುದಿಲ್ಲ. ಈ ಪ್ರಕ್ರಿಯೆಯನ್ನು ಧ್ರುವ ರಾತ್ರಿ ಎಂದು ಕರೆಯಲಾಗುತ್ತದೆ ಹಾಗೂ ಪ್ರತಿ ಚಳಿಗಾಲದಲ್ಲಿ ಈ ಪ್ರಕ್ರಿಯೆ ಕಂಡುಬರುತ್ತದೆ.

ಉತ್ತರ ಆಕ್ರ್ವಿಕ್ ವೃತ್ತದಲ್ಲಿ ಬರುವ ಈ ಪುಟ್ಟ ಪಟ್ಟಣವನ್ನು ಹಿಂದೆ ಬ್ಯಾರೊ ಎಂದು ಕರೆಯಲಾಗುತ್ತಿತ್ತು. ಈ ಪಟ್ಟಣದಲ್ಲಿ ನವೆಂಬರ್ 19ರಂದು ಸೂರ್ಯ ಉದಯಿಸಿ, ಮುಳುಗಿದ್ದಾನೆ. ಮುಂದಿನ 60 ದಿನಗಳ ಕಾಲ ಇಲ್ಲಿ ಸೂರ್ಯೋದಯ- ಸೂರ್ಯಾಸ್ತ ಇರುವುದಿಲ್ಲ. ಭೂಮಿಯ ಅಕ್ಷರೇಖೆಯ ಕಾರಣದಿಂದ ಇದು ಸಂಭವಿಸುತ್ತದೆ.

"ಧ್ರುವ ರಾತ್ರಿ ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಪ್ರತಿ ಚಳಿಗಾಲದಲ್ಲಿ ಈ ಪಟ್ಟಣದಲ್ಲಿ ಮತ್ತು ಆಕ್ರ್ಟಿಕ್ ವೃತ್ತದೊಳಗೆ ಇರುವ ಇತರ ಪಟ್ಟಣಗಳಲ್ಲಿ ಇದು ಕಂಡುಬರುತ್ತದೆ. ಈ ತಿರುವಿನ ಕಾರಣದಿಂದಾಗಿ ಸೂರ್ಯನ ಡಿಸ್ಕ್ ಇಲ್ಲಿ ಕಂಡುಬರುವುದಿಲ್ಲ" ಎಂದು ಸಿಎನ್‍ಎನ್ ಹವಾಮಾನ ತಜ್ಞ ಅಲಿಸನ್ ಕ್ಲಿಂಚರ್ ವಿವರಿಸಿದ್ದಾರೆ.

ಈ ಪ್ರಕ್ರಿಯೆಯ ಹೊರತಾಗಿಯೂ ಪಟ್ಟಣ ಸಂಪೂರ್ಣ ಕತ್ತಲಿನಿಂದ ಕೂಡಿರುವುದಿಲ್ಲ. ಹಗಲಿನ ವೇಳೆ ಮಬ್ಬು ಬೆಳಕು ಕಾಣಿಸುತ್ತದೆ. ಸೂರ್ಯಾಸ್ತ ಅಥವಾ ಸೂರ್ಯೋದಯಕ್ಕೆ ಮುನ್ನ ಎಂಥ ಚಿತ್ರಣ ಇರುತ್ತದೆಯೋ ಇಡೀ ದಿನ ಅಂಥ ವಾತಾವರಣ ಇರುತ್ತದೆ. ಇಂದಿನಿಂದ ಜನವರಿ 22ರ ವರೆಗೂ ದಿನದ ಹಲವು ಗಂಟೆಗಳ ಕಾಲ ಹೀಗಿರುತ್ತದೆ ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News