ಕಾಂಗ್ರೆಸ್ ಈಗ ಪರಿಣಾಮಕಾರಿ ಪ್ರತಿಪಕ್ಷವಾಗಿಲ್ಲ: ಕಪಿಲ್ ಸಿಬಲ್

Update: 2020-11-22 07:31 GMT

ಹೊಸದಿಲ್ಲಿ:"ಕಾಂಗ್ರೆಸ್ ಪಕ್ಷ ಈಗ ಪರಿಣಾಮಕಾರಿ ಪ್ರತಿಪಕ್ಷವಾಗಿಲ್ಲ. ಸಂಘಟನೆಯನ್ನು ಬಲಪಡಿಸಲು ಯಾವುದೇ ಪ್ರಯತ್ನಗಳು ನಡೆದಿಲ್ಲ'' ಎಂದು ಕಾಂಗ್ರೆಸ್ ಸಂಸದ ಹಾಗೂ ಪಕ್ಷದ ಭಿನ್ನಮತೀಯರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಕಪಿಲ್ ಸಿಬಲ್ ಹೇಳಿದ್ದಾರೆ.

ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಪಕ್ಷದ ಅಧ್ಯಕ್ಷರಾಗಿರಲು ತನಗೆ ಆಸಕ್ತಿ ಇಲ್ಲ ಎಂದು ರಾಹುಲ್ ಗಾಂಧಿ ಘೋಷಣೆ ಮಾಡಿ ಒಂದೂವರೆ ವರ್ಷಗಳು ಕಳೆದರೂ ಕಾಂಗ್ರೆಸ್‌ನಲ್ಲಿ ಪೂರ್ಣಾವಧಿ ಅಧ್ಯಕ್ಷರಿಲ್ಲ. ಒಂದೂವರೆ ವರ್ಷ ಕಾಲ ನಾಯಕನಿಲ್ಲದೆ ಪಕ್ಷವು ಹೇಗೆ ಕಾರ್ಯನಿರ್ವಹಿಸುತ್ತದೆ.. ಕಾಂಗ್ರೆಸ್ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು ಎಂದು ತಿಳಿದಿಲ್ಲ'' ಎಂದು ಅವರು ಹೇಳಿದರು.

 "ನಾವು ಗುಜರಾತ್‌ನ ಉಪ ಚುನಾವಣೆಯಲ್ಲಿ ಎಲ್ಲ 8 ಸ್ಥಾನಗಳನ್ನು ಸೋತಿದ್ದೇವೆ. ಕಾಂಗ್ರೆಸ್‌ನಿಂದ ಪಕ್ಷಾಂತರವಾಗಿದ್ದ ಕ್ಷೇತ್ರಗಳ ಶೇ.65 ಮತಗಳು ಬಿಜಿಪಿ ಪಾಲಾಗಿವೆ. ಮಧ್ಯಪ್ರದೇಶದಲ್ಲಿ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರ ಪಕ್ಷಾಂತರದಿಂದ ಸ್ಥಾನ ತೆರವಾಗಿತ್ತು. ಅಲ್ಲಿ ಕಾಂಗ್ರೆಸ್ ಕೇವಲ 8 ಸ್ಥಾನಗಳನ್ನು ಗೆದ್ದುಕೊಂಡಿದೆ. ನಾವು ಪರಿಣಾಮಕಾರಿ ಪರ್ಯಾಯ ಪಕ್ಷವಾಗಿಲ್ಲ. ಏನೋ ತಪ್ಪಾಗಿರಬೇಕು. ನಾವು ಅದರ ಬಗ್ಗೆ ಏನಾದರೂ ಮಾಡಬೇಕು'' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News