ಚೊಕ್ಕಬೆಟ್ಟು: ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ರಕ್ತದಾನ ಶಿಬಿರ

Update: 2020-11-23 05:27 GMT

ಸುರತ್ಕಲ್, ನ.23: ಜಾಕ್ ಇಲೆವೆನ್ ಚೊಕ್ಕಬೆಟ್ಟು ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ವೆನ್ಲಾಕ್ ಆಸ್ಪತ್ರೆಯ  ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ಚೊಕ್ಕಬೆಟ್ಟುವಿನ ಸರಕಾರಿ ಶಾಲೆಯಲ್ಲಿ ರವಿವಾರ ನಡೆಯಿತು.

ಚೊಕ್ಕಬೆಟ್ಟು ಜುಮಾ ಮಸೀದಿಯ ಖತೀಬ್  ಅಝೀಝ್ ದಾರಿಮಿ ದುಆ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಮಾಜಿ ಶಾಸಕ ಮೊಯ್ದಿನ್ ಬಾವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಪೊರೇಟರ್  ಶಂಶಾದ್, ಜುಮಾ ಮಸೀದಿಯ ಅಧ್ಯಕ್ಷ ಅಶ್ರಫ್ ಕಾನ, ನೌಶಾದ್, ಅಬೂಬಕರ್ ಕುಳಾಯಿ, ಅಬ್ದುಲ್ ಜಲೀಲ್ ಚೊಕ್ಕಬೆಟ್ಟು, ಬ್ಲಡ್ ಡೋನರ್ಸ್ ಸಂಸ್ಥೆಯ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ, ಕಾರ್ಯನಿರ್ವಾಹಕರಾದ ಮನ್ಸೂರ್ ಕಲ್ಲಡ್ಕ, ಫಾರೂಕ್   ಶಾಹಿದ್ ಸೂರಿಂಜೆ, ಇಮ್ತಿಯಾಜ್ ಜೋಕಟ್ಟೆ, ಜಾಕ್ ಇಲೆವೆನ್ ಚೊಕ್ಕಬೆಟ್ಟು ಇದರ ಕಾರ್ಯನಿರ್ವಾಹಕರಾದ ಅರ್ಶಾದ್, ನಿಝಾಮ್, ಫರ್ಹಾನ್, ಶಾಹಿಲ್, ಫರ್ವೇಝ್, ಕಾಮಿಲ್, ಮುಝಮ್ಮಿಲ್, ಶಾಹಿದ್, ಫಾಯಿಝ್, ಫೈಝ್, ಶಿಯಾ ಉಪಸ್ಥಿತರಿದ್ದರು

ಅಫ್ರಿದಿ ಚೊಕ್ಕಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಅರ್ಶದ್ ವಂದಿಸಿದರು.

ಶಿಬಿರದಲ್ಲಿ ಒಟ್ಟು 85 ಮಂದಿ ರಕ್ತದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News