ಫಲ ನೀಡದ ಲಾಕ್‌ಡೌನ್: ಹಸಿರುಮನೆ ಅನಿಲದ ಮಟ್ಟದಲ್ಲಿ ಭಾರೀ ಏರಿಕೆ

Update: 2020-11-23 16:20 GMT

ಜಿನೇವಾ,ನ.23: ಕೋವಿಡ್-19 ಸೋಂಕನ್ನು ತಡೆಗಟ್ಟಲು ಹಲವಾರು ದೇಶಗಳಲ್ಲಿ ತಿಂಗಳುಗಟ್ಟಲೆ ಲಾಕ್‌ಡೌನ್ ಹೇರಲಾದ ಹೊರತಾಗಿಯೂ ವಾತಾವರಣದಲ್ಲಿ ಹಸಿರುಮನೆ ಅನಿಲದ ಪ್ರಮಾಣದಲ್ಲಿ ಈ ವರ್ಷವೂ ಅಗಾಧವಾದ ಏರಿಕೆಯಾಗಿದೆಯೆಂದು ವಿಶ್ವಸಂಸ್ಥೆ ಸೋಮವಾರ ಕಳವಳ ವ್ಯಕ್ತಪಡಿಸಿದೆ.

  ಕೋವಿಡ್-19 ಹರಡುವುದನ್ನು ತಡೆಯಲು ಹೇರಲಾದ ಲಾಕ್‌ಡೌನ್ ಮತ್ತಿತರ ಕ್ರಮಗಳಿಂದಾಗಿ ಇಂಗಾಲದ ಅನಿಲದ ಹೊರಸೂಸುವಿಕೆಯನ್ನು ಕಡಿತಗೊಳಿಸಿದೆಯಾದರೂ, ವಾತಾವರಣದಲ್ಲಿ ತಾಪಮಾನವನ್ನು ಹೆಚ್ಚಿಸುತ್ತಿರುವ ಹಸಿರುಮನೆ ಅನಿಲಗಳ ದಾಖಲೆಯ ಸಾಂಧ್ರತೆಯನ್ನು ಕಡಿತಗೊಳಿಸಲು ಆಗಿಲ್ಲವೆಂದು ವಿಶ್ವ ಹವಾಮಾನ ಸಂಸ್ಥೆ (ಡಬ್ಲುಎಂಓ) ಕಳವಳ ವ್ಯಕ್ತಪಡಿಸಿದೆ.

  ಹಸಿರುಮನೆ ಅನಿಲದ ದೀರ್ಘಾವಧಿಯ ರೇಖಾನಕ್ಷೆ (ಗ್ರಾಫ್)ಯಲ್ಲಿ ಲಾಕ್‌ಡೌನ್ ಸಮಯದಲ್ಲಿ, ಇಂಗಾಲದ ಹೊರಸೂಸುವಿಕೆಯಲ್ಲಿ ಅಲ್ಪಮಟ್ಟದ ಇಳಿಕೆಯಾಗಿದೆಯಷ್ಟೇ. ಅದನ್ನು ನಾವು ಸುಸ್ಥಿರವಾಗಿ ಸಮಾನಂತರಗೊಳಿಸಬೇಕಾಗಿದೆ ಎಂದು ಡಬ್ಲ್ಯುಎಂಓ ವರಿಷ್ಠ ಪೆಟ್ಟೇರಿ ಟಾಲಾಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News