ಹೈದರಾಬಾದ್ ಹೆಸರು ಬದಲಿಸಲು ಕರೆ ನೀಡಿ ಭಾರೀ ಟ್ರೋಲ್ ಆದ ತೇಜಸ್ವಿ ಸೂರ್ಯ

Update: 2020-11-23 18:13 GMT

ಹೈದರಾಬಾದ್: ಭಾಗ್ಯ ನಗರದ ಪ್ರೀತಿಯ ಯುವ ಜನರೇ  ಎಂದು ಟ್ವೀಟ್ ಮಾಡಿದ್ದಲ್ಲದೆ ಚೇಂಜ್ ಹೈದರಾಬಾದ್ ಎಂಬ ಪೋಸ್ಟರ್ ನ್ನು ಹಂಚಿಕೊಳ್ಳುವ ಮೂಲಕ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ   ಮುಂದಿನ ತಿಂಗಳು ನಡೆಯಲಿರುವ ಹೈದರಾಬಾದ್ ಜಿಎಚ್ಎಂಸಿ ಚುನಾವಣೆಗೆ ಕಳೆದ ಸಂಜೆ ಪ್ರಚಾರ ಆರಂಭಿಸಿದ್ದರು.

ಹೈದರಾಬಾದ್ ಹೆಸರು ಬದಲಿಸುವುದಕ್ಕೆ ಟ್ವಿಟ್ಟರ್ ನಲ್ಲಿ ಕರೆ ನೀಡಿರುವ ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ ಗೆ ಒಳಗಾಗಿದ್ದು, ಸೂರ್ಯ ವಿರುದ್ಧ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.

ತೆಲುಗು ಭಾಷೆಯಲ್ಲಿ ಅಶ್ಲೀಲ ಪದ ಬಳಕೆ ಮೂಲಕ ಸಂಸದರೇ ವಾಪಸ್ ಹೋಗಿ ಎಂಬ ಹ್ಯಾಷ್ ಟ್ಯಾಗ್ ಸೋಮವಾರ ಆರಂಭವಾಗಿದ್ದು,  ಇದೇ ಮೊದಲ ಬಾರಿ ಹೈದರಾಬಾದ್ ನಲ್ಲಿ ಬೇರೆ ರಾಜ್ಯದ ರಾಜಕೀಯ ನಾಯಕರೊಬ್ಬರು ಈರೀತಿ ಭಾರೀ ಟ್ರೋಲ್ ಗೆ ಒಳಗಾಗಿದ್ದಾರೆ.  ಹೈದರಾಬಾದ್ ನ್ನು  ಭಾಗ್ಯ ನಗರ ಎಂದು ಕರೆದಿರುವುದಕ್ಕೆ ಹಲವು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು 'it is hyderbad not bhagyanaragr' ಎಂಬ ಹ್ಯಾಶ್ ಟ್ಯಾಗ್ ಬಳಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಹೈದರಾಬಾದ್ ನಲ್ಲಿ ಇನ್ನೂ ಅಭಿವೃದ್ದಿಯಾಗಿಲ್ಲ. ಉವೈಸಿ ಸಹೋದರರಿಂದ ಈ ನಗರಕ್ಕೆಯಾವುದೇ ಪ್ರಯೋಜನವಾಗಿಲ್ಲ.  ಅವರು ರೋಹಿಂಗ್ಯ ಮುಸ್ಲಿಮರನ್ನು ಕರೆತಂದು ಸೇರಿಸಿದ್ದು ಬಿಟ್ಟರೆ ಬೇರೆ ಏನೂ ಮಾಡಿಲ್ಲ ಎಂದು ಆರೋಪಿಸಿದರು.

ಹೈದರಾಬಾದ್ ಪಾಲಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಕೇಂದ್ರ ಸಚಿವರನ್ನು ಪ್ರಚಾರಕ್ಕೆ ಇಳಿಸಲು ಯೋಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News