ಚೊಕ್ಕಬೆಟ್ಟು : ಬ್ಲಡ್ ಡೋನರ್ಸ್ ಮಂಗಳೂರು 260ನೇ ರಕ್ತದಾನ ಶಿಬಿರ

Update: 2020-11-24 05:47 GMT

ಚೊಕ್ಕಬೆಟ್ಟು :  ಜಾಕ್ ಇಲೆವೆನ್ ಚೊಕ್ಕಬೆಟ್ಟು ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಜಂಟಿ ಸಹಭಾಗಿತ್ವದಲ್ಲಿ ಸರ್ಕಾರಿ ವೆನ್ಲಾಕ್ ಆಸ್ಪತ್ರೆ ಮಂಗಳೂರಿನ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ಸರ್ಕಾರಿ ಶಾಲೆ ಚೊಕ್ಕಬೆಟ್ಟುವಿನಲ್ಲಿ ನಡೆಯಿತು.

ಶಿಬಿರದ ಮುಂಚಿತವಾಗಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಮೊಯ್ದೀನ್ ಬಾವ ವಹಿಸಿ ಮಾತನಾಡಿದ್ದರು. ಒಳ್ಳೆಯ ಉದೇಶದಿಂದ  ಸಮಾಜ ಸೇವೆ ಮಾಡಿ, ಜಾತಿ ಧರ್ಮ ನೋಡದೆ  ಕಷ್ಟದಲ್ಲಿರುವ ಜನರನ್ನು ಹುಡುಕಿ ಅವರ ಕಷ್ಟಗಳ ಜೊತೆ ನಿಲ್ಲಿ ಎಂದರು. ಕಾರ್ಯಕ್ರಮ ದುಅ ಮೂಲಕ ಉದ್ಘಾಟಿಸಿ ಪ್ರಾಸ್ತಾವಿಕವಾಗಿ  ಮಾತನಾಡಿದ ಚೊಕ್ಕಬೆಟ್ಟು ಜುಮಾ ಮಸೀದಿಯ ಖತೀಬ್ ಅಝೀಝ್ ದಾರಿಮಿ ಅವರು ರಕ್ತಕ್ಕೆ ಪರ್ಯಾಯ ವಸ್ತುವೊಂದಿಲ್ಲ, ರಕ್ತ ಜಾತಿ ಸಂಘರ್ಷಗಳ ನಡುವೆ ಬಹಳ ಅಂತರ ಕಾಯ್ದುಕೊಂಡು ಎಲ್ಲರನ್ನು ಒಟ್ಟು ಸೇರಿಸುವ ಮಹಾತ್ಕಾರ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಶಂಶಾದ ಕಾರ್ಪೊರೇಟರ್ ಚೊಕ್ಕಬೆಟ್ಟು, ಅಶ್ರಫ್ ಕಾನ ಜುಮಾ ಮಸೀದಿ ಅಧ್ಯಕ್ಷರು, ನೌಶಾದ್ ಎಸ್. ಡಿ. ಪಿ. ಐ  ಚೂಕ್ಕಬೆಟ್ಟು, ಅಬೂಬಕರ್ ಕುಳಾಯಿ, ಅಬ್ದುಲ್ ಜಲೀಲ್ ಚೊಕ್ಕಬೆಟ್ಟು, ಬ್ಲಡ್ ಡೋನರ್ಸ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಅಧ್ಯಕ್ಷರಾದ ಸಿದ್ದೀಕ್ ಮಂಜೇಶ್ವರ, ಕಾರ್ಯನಿರ್ವಾಹಕರಾದ ಮನ್ಸೂರ್ ಕಲ್ಲಡ್ಕ, ಫಾರೂಖ್ ಜ್ಯೂಸ್ ರೊಮ್ಯಾಂಟಿಕ್, ಶಾಹಿದ್ ಸೂರಿಂಜೆ, ಇಮ್ತಿಯಾಝ್ ಜೋಕಟ್ಟೆ , ಜಾಕ್ ಇಲೆವೆನ್ ಚೊಕ್ಕಬೆಟ್ಟು ಇದರ ಕಾರ್ಯನಿರ್ವಾಹಕರಾದ ಅರ್ಶಾದ್, ನಿಝಾಮ್, ಫರ್ಹಾನ್, ಶಾಹಿಲ್, ಪರ್ವೆಝ್, ಕಾಮಿಲ್, ಮುಝಮಿಲ್, ಶಾಹಿದ್, ಫಾಯಿಝ್, ಫೈಝ್, ಶೀಯ ಉಪಸ್ಥಿತರಿದ್ದರು.

ಆಫ್ರಿದಿ ಪಾರಡೈಸ್ ಚೂಕ್ಕಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಜಾಕ್ ಇಲೆವೆನ್ ಚೊಕ್ಕಬೆಟ್ಟು ಇದರ ಅರ್ಶಾದ್  ವಂದಿಸಿದರು. ಒಟ್ಟು 85 ಮಂದಿ ಯುವಕರು ರಕ್ತದಾನ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News