ಈ ರಾಜ್ಯಗಳಿಂದ ಮಹಾರಾಷ್ಟ್ರಕ್ಕೆ ಪ್ರಯಾಣಿಸುವವರಿಗೆ ಕೋವಿಡ್-19 ನೆಗೆಟಿವ್ ವರದಿ ಕಡ್ಡಾಯ

Update: 2020-11-24 07:52 GMT

ಹೊಸದಿಲ್ಲಿ: ದಿಲ್ಲಿ ಎನ್‌ಸಿಆರ್, ಗುಜರಾತ್, ರಾಜಸ್ಥಾನ ಹಾಗೂ ಗೋವಾ ರಾಜ್ಯಗಳಿಂದ ರಾಜ್ಯವನ್ನು ಪ್ರವೇಶಿಸುವ ಎಲ್ಲ ಪ್ರಯಾಣಿಕರು ಕೋವಿಡ್-19 ನೆಗೆಟಿವ್ ಪ್ರಮಾಣಪತ್ರವನ್ನು ಹೊಂದಿರಬೇಕೆಂದು ಮಹಾರಾಷ್ಟ್ರ ಸರಕಾರ ಸೋಮವಾರ ಕಡ್ಡಾಯಗೊಳಿಸಿದೆ.

ರಾಜ್ಯ ಸರಕಾರವು ಹೊಸ ರೀತಿಯ ನಿಯಮಗಳನ್ನು ಜಾರಿಗೊಳಿಸಿದ್ದು, ಇದರ ಪ್ರಕಾರ ರೈಲುಗಳು ಅಥವಾ ವಿಮಾನಗಳಲ್ಲಿ ಪ್ರಯಾಣಿಸುವ ದೇಶೀಯ ಪ್ರಯಾಣಿಕರು ರಾಜ್ಯಕ್ಕೆ ಪ್ರವೇಶಿಸುವ ಮೊದಲು ಆರ್‌ಟಿ-ಪಿಸಿಆರ್ ನೆಗೆಟಿವ್ ಟೆಸ್ಟ್ ರಿಪೋರ್ಟ್‌ನ್ನು ತಮ್ಮ್‌ಂದಿಗೆ ಇಟ್ಟುಕೊಂಡಿರಬೇಕು.

 ವಿಮಾನದ ಮೂಲಕ ಬರುವವರು ವಿಮಾನವನ್ನ ಏರುವಮೊದಲು ನೆಗೆಟಿವ್ ಟೆಸ್ಟ್ ವರದಿಯನ್ನು ಏರ್‌ಪೋರ್ಟ್ ಅಧಿಕಾರಿಗಳಿಗೆ ತೋರಿಸಬೇಕು.ಮಹಾರಾಷ್ಟ್ರಕ್ಕೆ ಪ್ರವೇಶಿಸುವ 72 ಗಂಟೆಗಳ ಮೊದಲು ಆರ್‌ಟಿ-ಪಿಸಿಆರ್ ಸ್ಯಾಂಪಲ್ ಸಂಗ್ರಹಿಸಿರಬೇಕು. ವರದಿಯನ್ನು ಹೊಂದಿರದ ಪ್ರಯಾಣಿಕರು ಲ್ಯಾಂಡ್ ಆಗಿರುವ ಏರ್‌ಪೋರ್ಟ್‌ನಲ್ಲಿ ಪರೀಕ್ಷೆ ಮಾಡಬೇಕು. ಏರ್‌ಪೋರ್ಟ್ ಅಧಿಕಾರಿಗಳು ಪರೀಕ್ಷೆಗೆ ವ್ಯವಸ್ಥೆ ಮಾಡುತ್ತಾರೆ. ಪರೀಕ್ಷೆಯ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕಾಗುತ್ತದೆ.

 ದಿಲ್ಲಿ, ರಾಜಸ್ಥಾನ, ಗುಜರಾತ್ ಹಾಗೂ ಗೋವಾದಿಂದ ಬರುವ ಪ್ರಯಾಣಿಕರು ನೆಗೆಟಿವ್ ಆರ್‌ಟಿ-ಪಿಸಿಆರ್ ಟೆಸ್ಟ್ ಪರೀಕ್ಷೆಯ ವರದಿಯನ್ನು ಹೊಂದಿರಬೇಕು. ಇದು ಮಹಾರಾಷ್ಟ್ರಕ್ಕೆ ತೆರಳಲು 96 ಗಂಟೆಗಿಂತ ಮೊದಲು ಪರೀಕ್ಷೆ ಮಾಡಿಸಿರಬೇಕು.

ವರದಿ ಹೊಂದಿರದ ರೈಲಿನ ಪ್ರಯಾಣಿಕರು ರೈಲ್ವೆ ಸ್ಟೇಶನ್‌ನಲ್ಲಿ ತಪಾಸಣೆಗೊಳಗಾಗಬೇಕು. ಕೊರೋನ ಲಕ್ಷಣ ಇಲ್ಲದವರನ್ನು ರಾಜ್ಯದೊಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಲಕ್ಷಣ ಕಾಣಿಸಿಕೊಂಡವರನ್ನು ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.

ಸುಪ್ರೀಂಕೋರ್ಟ್ ದಿಲ್ಲಿ, ಗುಜರಾತ್, ಮಹಾರಾಷ್ಟ್ರ ಹಾಗೂ ಅಸ್ಸಾಂನಿಂದ ಕೊರೋನ ಸ್ಥಿತಿಗತಿ ವರದಿ ಸಲ್ಲಿಸುವಂತೆ ಕೋರಿದ ಕೆಲವೇ ಗಂಟೆಗಳ ಬಳಿಕ ರಾಜ್ಯ ಸರಕಾರ ಇಂತಹದ್ದೊಂದು ಸುತ್ತೋಲೆ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News