ಅಮೆರಿಕ ಯುದ್ಧನೌಕೆಯನ್ನು ಹೊರಗಟ್ಟಿದ ರಶ್ಯ ಹಡಗು

Update: 2020-11-24 16:39 GMT
ಫೋಟೊ ಕೃಪೆ: twitter.com

ಮಾಸ್ಕೋ (ರಶ್ಯ), ನ. 24: ಜಪಾನ್ ಸಮುದ್ರದಲ್ಲಿ ರಶ್ಯಕ್ಕೆ ಸೇರಿದ ಜಲಪ್ರದೇಶದಲ್ಲಿದ್ದ ಅವೆುರಿಕ ನೌಕಾಪಡೆಯ ನಿರ್ದೇಶಿತ ಕ್ಷಿಪಣಿ ನಾಶಕ ನೌಕೆ ‘ಯುಎಸ್‌ಎಸ್ ಜಾನ್ ಎಸ್. ಮೆಕೇನ್’ನ್ನು ರಶ್ಯದ ಯುದ್ಧನೌಕೆಯೊಂದು ಹೊರಗಟ್ಟದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಮಂಗಳವಾರ ತಿಳಿಸಿದೆ.

 ರಶ್ಯದ ಯುದ್ಧನೌಕೆ ‘ಅಡ್ಮಿರಲ್ ವಿನೊಗ್ರಡೊವ್’ ಅಮೆರಿಕದ ಯುದ್ಧನೌಕೆಗೆ ಬಾಯಿ ಮಾತಿನಿಂದ ಎಚ್ಚರಿಕೆ ನೀಡಿತು ಹಾಗೂ ಅದು ಅಲ್ಲಿಂದ ಹೋಗುವಂತೆ ಮಾಡುವುದಕ್ಕಾಗಿ ಅದಕ್ಕೆ ಢಿಕ್ಕಿ ಹೊಡೆಯವುದಾಗಿ ಬೆದರಿಸಿತು ಎಂದು ಸಚಿವಾಲಯ ಹೇಳಿದೆ.

ಎಚ್ಚರಿಕೆಯ ಬಳಿಕ, ಅಮೆರಿಕದ ಯುದ್ಧನೌಕೆಯು ತಕ್ಷಣ ತಟಸ್ಥ ಜಲಪ್ರದೇಶಕ್ಕೆ ಮರಳಿತು ಎಂದು ಹೇಳಿಕೆಯೊಂದರಲ್ಲಿ ಸಚಿವಾಲಯ ತಿಳಿಸಿದೆ.

ಇಂಥ ಘಟನೆಗಳು ಸಂಭವಿಸುವುದು ಅಪರೂಪವಾಗಿದೆ. ಇದು ಶೀತಲ ಸಮರೋತ್ತರ ಕಾಲದಲ್ಲಿ ಅವೆುರಿಕ ಮತ್ತು ರಶ್ಯಗಳ ನಡುವಿನ ಸೇನಾ ಬಾಂಧವ್ಯವು ಹಳಸಿರುವುದನ್ನು ಸೂಚಿಸುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News