ಐಎಸ್ಎಲ್: ಜಮ್ಶೇಡ್ ಪುರ ವಿರುದ್ಧ ಚೆನ್ನೈಯಿನ್ ಗೆ ಜಯ

Update: 2020-11-24 16:18 GMT

ವಾಸ್ಕೊ: ಇಂಡಿಯನ್ ಸೂಪರ್ ಲೀಗ್-2020ರ ಮಂಗಳವಾರ ನಡೆದ ಐದನೇ ಪಂದ್ಯದಲ್ಲಿ ಚೆನ್ನೈಯಿನ್ ಎಫ್ ಸಿ ಜೆಮ್ಶೇಡ್ಪುರ ಎಫ್ ಸಿ ಯನ್ನು 2-1 ಗೋಲುಗಳ ಅಂತರದಿಂಧ ಮಣಿಸಿದೆ.

ಚೆನ್ನೈಯಿನ್ ಪರ ಅನಿರುದ್ಧ ಥಾಪ(1ನೇ ನಿಮಿಷ)ಮೊದಲ ನಿಮಿಷದಲ್ಲಿ ಗೋಲುಗಳಿಸಿ ಮುನ್ನಡೆ ಒದಗಿಸಿಕೊಟ್ಟರು. ಇಸ್ಮಾಯಿಲ್ ಗೊನ್ಸಾಲ್ವೆಸ್ ಪೆನಾಲ್ಟಿ ಕಾರ್ನರ್ ಮೂಲಕ ಮತ್ತೊಂದು ಗೋಲು ಗಳಿಸಿ ಚೆನ್ನೈಯಿನ್ ಮೊದಲಾರ್ಧದಲ್ಲಿ 2-0 ಮುನ್ನಡೆ ಸಾಧಿಸಲು ನೆರವಾದರು. ಜಮ್ಶೇಡ್ ಪುರ ಪರವಾಗಿ ನೆರಿಜಸ್ ವಲ್ಕಿಸ್ 37ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿದರು.

ಕಳೆದ 5 ಮುಖಾಮುಖಿಯಲ್ಲಿ ತಲಾ ಒಂದು ಪಂದ್ಯವನ್ನು ಜಯಿಸಿರುವ ಉಭಯ ತಂಡಗಳು ಸಮಬಲದ ಪ್ರದರ್ಶನ ನೀಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News