ಕೇರಳದಲ್ಲಿ ಲವ್ ಜಿಹಾದ್: ಎನ್ಐಎಗೆ ಯಾವುದೇ ಪುರಾವೆ ಲಭಿಸಿಲ್ಲ

Update: 2020-11-24 18:27 GMT

ಹೊಸದಿಲ್ಲಿ: ಕೇರಳದಲ್ಲಿ ಅಂತರ್-ಧರ್ಮೀಯ ವಿವಾಹಗಳ ಕುರಿತು ತನಿಖೆ ನಡೆಸುತ್ತಿರುವಾಗ ಮಹಿಳೆ ಹಾಗೂ ಪುರುಷನನ್ನು ವಿವಾಹವಾಗಲು, ಇಸ್ಲಾಂಗೆ ಮತಾಂತರವಾಗಲು ಒತ್ತಾಯಿಸಲಾಗಿದೆ ಎಂಬ ಕುರಿತು ರಾಷ್ಟ್ರೀಯ ತನಿಖಾ ಸಂಸ್ಥೆಗೆ ( ಎನ್ಐಎ)ಯಾವುದೇ ಪುರಾವೆ ದೊರಕಿಲ್ಲ ಎಂದು Hindustan Times ವರದಿ ಮಾಡಿದೆ.

ಮತಾಂತರಕ್ಕೆ ಅನುಕೂಲವಾಗುವಂತೆ ಪ್ರಯತ್ನಗಳು ನಡೆದಿರಬಹುದು. ಆದರೆ ಈ ಪ್ರಕರಣದ ವಿಚಾರಣೆಗೆ ಕಾರಣವಾಗುವ ದೊಡ್ಡ ಅಪರಾಧ ವಿನ್ಯಾಸದ ಕುರಿತು ಯಾವುದೇ ಪುರಾವೆಗಳು ಎನ್ ಐಎಗೆ ದೊರಕಿಲ್ಲ ಎಂದು ಪ್ರಕರಣದ ಕುರಿತು ತಿಳಿದಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸುಪ್ರೀಂಕೋರ್ಟ್ ನಲ್ಲಿ ಲವ್ ಜಿಹಾದ್ ಕುರಿತಂತೆ ಎನ್ ಐಎ ಯಾವುದೇ ವರದಿಯನ್ನು ಸಲ್ಲಿಸುವ ಸಾಧ್ಯತೆ ಇಲ್ಲ. ಈ ಯಾವುದೇ ಪ್ರಕರಣಗಳಲ್ಲಿ ಪುರುಷ  ಅಥವಾ ಮಹಿಳೆ ಒತ್ತಾಯದಿಂದ ಮತಾಂತರವಾಗಲು ಒತ್ತಾಯಿಸಲಾಯಿತು ಎಂದು ಸೂಚಿಸುವ ಯಾವುದೇ ಪುರಾವೆಗಳು ಸಂಸ್ಥೆಗೆ ಸಿಗದ ಕಾರಣ  ಈ ಪ್ರಕರಣವನ್ನು ಮುಕ್ತಾಯಗೊಳಿಸಲು ಎನ್ಐಎ ಚಿಂತಿಸುತ್ತಿದೆ ಎಂದು ಅಧಿಕಾರಿಯೊಬ್ಬರು Hindustan Times ಗೆ ತಿಳಿಸಿದ್ದಾರೆ.

ಕಾನೂನು ಜಾರಿ ನಿರ್ದೇಶನಾಲಯದ ದತ್ತಾಂಶದಲ್ಲಿರುವ 89 ಮದುವೆಗಳ ಪಟ್ಟಿಯಿಂದ 11 ಅಂತರ್ ಧರ್ಮೀಯ ವಿವಾಹವನ್ನು ಎನ್ ಐಎ ಪರಿಶೀಲಿಸಿದೆ.  ಲವ್ ಜಿಹಾದ್  ಅಥವಾ ಹಿಂದೂ ಪುರುಷ ಹಾಗೂ ಮಹಿಳೆಯನ್ನು ಇಸ್ಲಾಮ್ ಗೆ ಬಲವಂತವಾಗಿ ಮತಾಂತರಗೊಳಿಸುವ ಕುರಿತ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತನಿಖೆಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಎನ್ ಐಎ ಕೇರಳದಲ್ಲಿ ತನಿಖೆ ನಡೆಸಿತ್ತು. ಹಾದಿಯಾ ಪ್ರಕರಣದ ಭಾಗವಾಗಿ ಈ ತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News