ಸತತ ಮೂರನೇ ದಿನ ಚಿನ್ನ, ಬೆಳ್ಳಿ ದರ ಇಳಿಕೆ

Update: 2020-11-25 12:10 GMT

ಹೊಸದಿಲ್ಲಿ : ಸತತ ಮೂರನೇ ದಿನ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಇಳಿಕೆಯಾಗಿದೆ. ಎಂಸಿಎಕ್ಸ್ ನಲ್ಲಿ ಗೋಲ್ಡ್ ಫ್ಯೂಚರ್ಸ್ ಮೌಲ್ಯ ಶೇ 0.21ರಷ್ಟು ಇಳಿಕೆಯಾಗಿ 10 ಗ್ರಾಂಗೆ ರೂ 48,485ಗೆ ಇಳಿದಿದೆ. ಬೆಳ್ಳಿಯ ದರ ಕೆಜಿಗೆ ರೂ 59,460ಕ್ಕೆ ಇಳಿದಿದೆ.

ಇಂದು ಚಿನ್ನದ ಬೆಲೆಯಲ್ಲಿ ರೂ. 900ರಷ್ಟು ಇಳಿಕೆಯಾಗಿದ್ದರೆ ಮಂಗಳವಾರ ರೂ 750ರಷ್ಟು ಇಳಿಕೆಯಾಗಿತ್ತು. ಬೆಳ್ಳಿ ದರ ಮಂಗಳವಾರ ರೂ. 1600ರಷ್ಟು ಕಡಿಮೆಯಾಗಿದ್ದರೆ ಇಂದು ರೂ. 800ರಷ್ಟು ಇಳಿಕೆಯಾಗಿದೆ.

ಕೋವಿಡ್ ಲಸಿಕೆಯ ಕುರಿತು ಆಶಾದಾಯಕ ವರದಿಗಳು ಹಾಗೂ ಅಮೆರಿಕಾದಲ್ಲಿ ರಾಜಕೀಯ ಅನಿಶ್ಚಿತತೆ ಅಂತ್ಯವಾಗುವ ಲಕ್ಷಣಗಳಿಂದಾಗಿ ಈ ಬೆಳವಣಿಗೆ ನಡೆದಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News