ಅಂಗೀಕಾರ ಸಿಕ್ಕ ಮೊದಲ ವಾರದಲ್ಲೇ 64 ಲಕ್ಷ ಫೈಝರ್ ಲಸಿಕೆ ವಿತರಣೆ

Update: 2020-11-25 14:12 GMT

ವಾಶಿಂಗ್ಟನ್, ನ. 25: ಫೈಝರ್-ಬಯೋಎನ್‌ಟೆಕ್ ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ಅಂಗೀಕಾರ ಲಭಿಸಿದ ಮೊದಲ ವಾರದಲ್ಲಿ ಲಸಿಕೆಯ 64 ಲಕ್ಷ ಡೋಸ್‌ಗಳನ್ನು ವಿತರಿಸಲು ಅಮೆರಿಕ ಉದ್ದೇಶಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಲಸಿಕೆಯ ತುರ್ತು ಬಳಕೆಗೆ ಮುಂದಿನ ತಿಂಗಳು ಅಂಗೀಕಾರ ಲಭಿಸುವ ನಿರೀಕ್ಷೆ ಇದೆ.

ಅಮೆರಿಕದಲ್ಲಿ ಕೊರೋನ ಸೋಂಕು ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿರುವಂತೆಯೇ, ಈ ಲಸಿಕೆಯ ತುರ್ತು ಬಳಕೆಗೆ ಅಂಗೀಕಾರ ನೀಡಬೇಕೇ, ಬೇಡವೇ ಎಂಬುದನ್ನು ನಿರ್ಧರಿಸಲು ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆಯ ಪರಿಣತರ ಸಮಿತಿಯೊಂದು ಡಿಸೆಂಬರ್ 10ರಂದು ಸಭೆ ಸೇರಲಿದೆ.

ಅಮೆರಿಕದಲ್ಲಿ ಈವರೆಗೆ 1.25 ಕೋಟಿ ಕೊರೋನ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ ಹಾಗೂ 2,59,600 ಮಂದಿ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲೇ 1.67 ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗಿವೆ ಹಾಗೂ 2,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News