ಕೊರೋನ ಸೋಂಕು: ಕಳೆದ 24 ಗಂಟೆಗಳಲ್ಲಿ 481 ಮಂದಿ ಸಾವು

Update: 2020-11-25 17:28 GMT

 ಹೊಸದಿಲ್ಲಿ, ನ. 25: ಕಳೆದ 24 ಗಂಟೆಗಳಲ್ಲಿ ಕೊರೋನ ಸೋಂಕಿನ ಹೊಸ 44,376 ಪ್ರಕರಣಗಳು ದಾಖಲಾಗುವ ಮೂಲಕ ಕೊರೋನ ಸೋಂಕಿನ ಪ್ರಕರಣಗಳ ಒಟ್ಟು ಸಂಖ್ಯೆ 92 ಲಕ್ಷದ ಗಡಿ ದಾಟಿದೆ. ಆದರೆ, ಗುಣಮುಖರಾದವರ ಸಂಖ್ಯೆ 82.42 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.

ದೇಶದಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಒಟ್ಟು ಸಂಖ್ಯೆ 92,22,216ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 481 ಸಾವು ಸಂಭವಿಸುವುದರೊಂದಿಗೆ ಕೊರೋನ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 1,34,699ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯದ ದತ್ತಾಂಶ ಹೇಳಿದೆ. ಮಂಗಳವಾರ 6,079 ಸಕ್ರಿಯ ಪ್ರಕರಣಗಳು ದಾಖಲಾಗುವುದರೊಂದಿಗೆ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,44,746ಕ್ಕೆ ಏರಿಕೆಯಾಗಿದೆ. ಕೊರೋನ ಸೋಂಕಿನಿಂದ ಗುಣಮುಖರಾರುವವರ ಸಂಖ್ಯೆ 86,42,771ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಗುಣಮುಖರಾಗುತ್ತಿರವವರ ಪ್ರಮಾಣ ಶೇ. 93.72ಕ್ಕೆ ಏರಿಕೆಯಾಗಿದೆ. ಕೊರೋನ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಪ್ರಮಾಣ ಶೇ. 1.46 ದಾಖಲಾಗಿದೆ. ಮಂಗಳವಾರ 11,59,032 ಸೇರಿದಂತೆ ನವೆಂಬರ್ 24ರ ವರೆಗೆ 13.48 ಕೋಟಿ ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ದಿಲ್ಲಿಯಲ್ಲಿ 109, ಪಶ್ಚಿಮಬಂಗಾಳ 49, ಹರ್ಯಾಣ ಹಾಗೂ ಉತ್ತರಪ್ರದೇಶ ತಲಾ 33, ಮಹಾರಾಷ್ಟ್ರ 30, ಕೇರಳ 24 ಪಂಜಾಬ್ 22 ಹಾಗೂ ಚಂಡಿಗಢದಲ್ಲಿ 21 ಸೇರಿದಂತೆ ಒಂಟು 481 ಸಾವು ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News