ಚೀನಾ ಮಾಲಕತ್ವದ ಎಂಜಿ ಮೋಟರ್‌ ಕಾರ್ಯಕ್ರಮದಲ್ಲಿ 3 ಸೇನಾ ಪಡೆಗಳ ವರಿಷ್ಠ ಬಿಪಿನ್ ರಾವತ್ ಭಾಗಿ!

Update: 2020-11-27 17:34 GMT
 ಫೋಟೊ ಕೃಪೆ: twitter.com

ಹೊಸದಿಲ್ಲಿ, ನ. 27: ಚೀನಾ ಮಾಲಕತ್ವದ ಎಂಜಿ ಮೋಟರ್‌ನ ಎಲೆಕ್ಟ್ರಿಕ್ ವಾಹನ (ಇವಿ) ದ ಪ್ರಾಯೋಗಿಕ ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಮೂರು ಪಡೆಗಳ ವರಿಷ್ಠ ಬಿಪಿನ್ ರಾವತ್ ವಿವಾದಕ್ಕೆ ಒಳಗಾಗಿದ್ದಾರೆ.

ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಉದ್ವಿಗ್ನತೆ ಮುಂದುವರಿಯುತ್ತಿರುವಂತೆ ದಿಲ್ಲಿ ಹಾಗೂ ಆಗ್ರಾ ನಡುವೆ ಎಂಜಿ ಮೋಟರ್‌ನ ಇಲೆಕ್ಟ್ರಿಕ್ ವಾಹನದ ಪ್ರಾಯೋಗಿಕ ಸಂಚಾರಕ್ಕೆ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಹಾಗೂ ರಾವತ್ ಅವರು ಸರಕಾರದ ಇತರ ಗಣ್ಯರೊಂದಿಗೆ ನವೆಂಬರ್ 25ರಂದು ಹಸಿರು ನಿಶಾನೆ ತೋರಿಸಿದ್ದರು. ಚೀನಾ ಮಾಲಕತ್ವದ ಕಂಪೆನಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇವರ ನಿರ್ಧಾರವನ್ನು ಹಲವು ಟ್ವಿಟರ್ ಬಳಕೆದಾರರು ಪ್ರಶ್ನಿಸಿದ್ದಾರೆ.

‘‘ಚೀನಾದ ಕಮ್ಯೂನಿಷ್ಟ್ ಪಕ್ಷ ಮಾಲಕತ್ವದ ಕಂಪೆನಿ ಎಂಜಿ ಮೋಟರ್ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಮೂರು ಪಡೆಗಳ ವರಿಷ್ಠ ಪಾಲ್ಗೊಂಡಿರುವುದು ನೋಡಿದಾಗ ಅಚ್ಚರಿ ಉಂಟಾಗುತ್ತದೆ. ಅನಂತರ ಚೀನಾ ಆ್ಯಪ್‌ಗಳನ್ನು ಬ್ಯಾನ್ ಮಾಡಲಾಯಿತು’’ ಎಂದು ಬಳಕೆದಾರರೊಬ್ಬರು ಟ್ಟಿಟ್ಟರ್‌ನಲ್ಲಿ ಬರೆದಿದ್ದಾರೆ.

2020 ಜೂನ್‌ ನಲ್ಲಿ ಚೀನಾ ಸೇನೆ ಗಲ್ವಾನ್ ನಲ್ಲಿ ದಾಳಿ ನಡೆಸಿದ ಪರಿಣಾಮ ಭಾರತದ 20 ಯೋಧರು ಹುತಾತ್ಮರಾಗಿದ್ದರು. ‘‘ಆದರೆ, ನಾವು ಅದನ್ನು ಮರೆತಿದ್ದೇವೆ ಹಾಗೂ ಶಾಂಘಾ ಅಟೋಮೋಟಿವ್ ಇಂಡಸ್ಟ್ರಿ ಕಾರ್ಪೋರೇಶನ್‌ನೊಂದಿಗೆ ವ್ಯವಹಾರ ನಡೆಸುತ್ತಿದ್ದೇವೆ’’ ಎಂದು ರವೀಂದ್ರ ಭಂಡಾರಿ ಟ್ವೀಟ್ ಮಾಡಿದ್ದಾರೆ. ಮೇಯಲ್ಲಿ ಉದ್ಭವಿಸಿದ ಸೇನಾ ಬಿಕ್ಕಟ್ಟನ್ನು ಪರಿಹರಿಸಲು ಚೀನಾ ಹಾಗೂ ಭಾರತ ನವೆಂಬರ್ 6ರಂದು ಕಾರ್ಪ್ಸ್ ಕಮಾಂಡರ್ ಮಟ್ಟದ 8ನೇ ಸುತ್ತಿನ ಸಭೆ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News