ಪಿಡಿಪಿ ನಾಯಕ ವಹೀದ್ ಪರ್ರಾಗೆ 15 ದಿನ ಎನ್‌ಐಎ ಕಸ್ಟಡಿ

Update: 2020-11-27 18:21 GMT

ಹೊಸದಿಲ್ಲಿ, ನ. 27: ಪಿಡಿಪಿ ನಾಯಕ ವಹೀದ್ ಪರ್ರಾನನ್ನು ಎನ್‌ಐಎ ನ್ಯಾಯಾಲಯ ಶುಕ್ರವಾರ 15 ದಿನಗಳ ಕಾಲ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಕಸ್ಟಡಿಗೆ ನೀಡಿದೆ.

 2019ರ ಸಂಸದೀಯ ಚುನಾವಣೆ ಸಂದರ್ಭ ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರ ಬೆಂಬಲ ಪಡೆಯಲು ಸಂಚು ರೂಪಿಸಿದ ಆರೋಪದಲ್ಲಿ ಎನ್‌ಐಎ ಬುಧವಾರ ಪರ್ರಾನನ್ನು ಬಂಧಿಸಿತ್ತು. ನವೆಂಬರ್ 28ರಂದು ಆರಂಭವಾಗಲಿರುವ ಚುನಾವಣೆಗೆ ಪರ್ರಾ ನಾಮಪತ್ರ ಸಲ್ಲಿಸಿದ್ದರು. ಎನ್‌ಐಎ ಗುರುವಾರ ಪರ್ರಾನನ್ನು ದಿಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಿತು. ಅಲ್ಲದೆ, ಜಮ್ಮುವಿನಲ್ಲಿರುವ ನಿಯೋಜಿತ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಅನುಮತಿ ನೀಡುವಂತೆ ಮನವಿ ಮಾಡಿತ್ತು. ಅನುಮತಿ ಬಳಿಕ ಎನ್‌ಐಎ ಪರ್ರಾನನ್ನು ಜಮ್ಮುವಿಗೆ ಕರೆದೊಯ್ದು ನಿಯೋಜಿತ ಎನ್‌ಐಎ ನ್ಯಾಯಾಲಯದ ಮುಂದೆ ಹಾಜರುಪಡಿಸಿತು. ಎನ್‌ಐಎ ನ್ಯಾಯಾಲಯ ಪರ್ರಾಗೆ 15 ದಿನಗಳ ಕಸ್ಟಡಿ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News