ಡಿ. 3ರಂದು ಕನಕ ಜಯಂತಿ ಉಪನ್ಯಾಸ

Update: 2020-11-28 12:08 GMT

ಉಡುಪಿ, ನ.28: ಮಣಿಪಾಲ ಮಾಹೆಯ ಕನಕದಾಸ ಅಧ್ಯಯನ ಸಂಶೋಧನ ಪೀಠದ ಆಶ್ರಯದಲ್ಲಿ ಸಂತಕವಿ ಕನಕದಾಸ ಜಯಂತಿಯನ್ನು ಡಿ.3 ರಂದು ಮಧ್ಯಾಹ್ನ 3.15ಕ್ಕೆ ಉಡುಪಿ ಎಂ.ಜಿ.ಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಶಿವಮೊಗ್ಗದ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರಜ್ಞ ಡಾ.ಎಸ್.ಜಿ.ಸಾಮಕ್ ‘ಬಾಡಾ ಉತ್ಖನನದಲ್ಲಿ ಕಂಡುಬಂದ ಕನಕದಾಸರ ನೆಲೆ’ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ದಿವ್ಯಶ್ರೀ ಮಣಿಪಾಲ ಅವರಿಂದ ಕನಕದಾಸರ ಗೀತೆಗಳ ಗಾಯನ ನಡೆಯಲಿದೆ ಎಂದು ಕೇಂದ್ರದ ಸಂಯೋಜಕ ಪ್ರೊ.ವರದೇಶ್ ಹಿರೇಗಂಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News