ರಿಕ್ಷಾ ಚಾಲಕ ನಾಪತ್ತೆ

Update: 2020-11-28 16:00 GMT

ಉಳ್ಳಾಲ : ಪತ್ನಿ ಮಕ್ಕಳನ್ನು ತಾಯಿ ಮನೆಗೆ ಬಿಟ್ಟು ಹೋದ ರಿಕ್ಷಾ ಚಾಲಕ ನಾಪತ್ತೆಯಾಗಿರುವ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ.18 ರಿಂದ ರಾಜೇಶ್ (34) ನಾಪತ್ತೆಯಾಗಿದ್ದಾರೆ. ಪತ್ನಿ ಸುಷ್ಮಾ ಮತ್ತು ಪುತ್ರ ಮನ್ವಿತ್ ಇಬ್ಬರನ್ನು ರಿಕ್ಷಾದಲ್ಲಿ ಅವರ ಕೋಟೆಕಾರು ಕುಟ್ಟಿಹಿತ್ಲು ಎಂಬಲ್ಲಿರುವ ತಾಯಿ ಮನೆಗೆ ಬಿಟ್ಟು ತೆರಳಿದವರು ಬಳಿಕ ನಾಪತ್ತೆಯಾಗಿದ್ದಾರೆ. ಈ ಕುರಿತು ಪತ್ನಿ ನ.25 ರಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News