ಎರಡನೇ ಏಕದಿನ: ಭಾರತಕ್ಕೆ ಸತತ ಸೋಲು, ಸರಣಿ ಆಸ್ಟ್ರೇಲಿಯ ಕೈವಶ

Update: 2020-11-29 13:44 GMT

ಸಿಡ್ನಿ: ನಾಯಕ ವಿರಾಟ್ ಕೊಹ್ಲಿ(89, 87 ಎಸೆತ) ಹಾಗೂ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಕೆ.ಎಲ್.ರಾಹುಲ್(76, 66 ಎಸೆತ)ಹೋರಾಟದ ಹೊರತಾಗಿಯೂ ಭಾರತ ತಂಡ ರವಿವಾರ ಇಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ದ್ವಿತೀಯ ಏಕದಿನ ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ 51 ರನ್ ಗಳ ಅಂತರದಿಂದ ಸೋಲುಂಡಿದೆ.

ಭಾರತದ ಪರ ನಾಯಕ ಕೊಹ್ಲಿ ಸರ್ವಾಧಿಕ ಸ್ಕೋರ್ (89, 87 ಎಸೆತ, 7 ಬೌಂಡರಿ, 2 ಸಿಕ್ಸರ್)ಗಳಿಸಿದರು. ರಾಹುಲ್ 66 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 5 ಸಿಕ್ಸರ್ ಗಳನ್ನು ಒಳಗೊಂಡ 76 ರನ್ ಗಳಿಸಿದರು.  ಶಿಖರ್ ಧವನ್ 30, ಶ್ರೇಯಸ್ ಅಯ್ಯರ್ 38, ಹಾರ್ದಿಕ್ ಪಾಂಡ್ಯ 28, ಜಡೇಜ 24 ರನ್ ಗಳಿಸಿದರು. ಆಸ್ಟ್ರೇಲಿಯದ ಪರ ಕಮಿನ್ಸ್ (3-67) ಯಶಸ್ವಿ ಬೌಲರ್ ಎನಿಸಿಕೊಂಡರು. ಹೇಝಲ್ ವುಡ್(2-59) ಹಾಗೂ ಝಾಂಪ(2-62)ತಲಾ ಎರಡು ವಿಕೆಟ್ ಗಳನ್ನು ಪಡೆದರು.

ಗೆಲ್ಲಲು 390 ರನ್ ಗುರಿ ಬೆನ್ನಟ್ಟಿದ ಭಾರತ ತಂಡ 50 ಓವರ್ ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 338 ರನ್ ಗಳಿಸಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯ ತಂಡ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ವಶಪಡಿಸಿಕೊಂಡಿದೆ.

ಸರಣಿಯಲ್ಲಿ ಸತತ 2ನೆ ಶತಕ ಸಿಡಿಸಿ ಆಸ್ಟ್ರೇಲಿಯ 389 ರನ್ ಗಳಿಸಲು ಕಾರಣವಾಗಿದ್ದ ಮಾಜಿ ನಾಯಕ ಸ್ಟೀವನ್ ಸ್ಮಿತ್ 'ಪಂದ್ಯಶ್ರೇಷ್ಠ' ಗೌರವಕ್ಕೆ ಪಾತ್ರರಾದರು.

ಭಾರತಕ್ಕೆ ಸತತ 7ನೇ ಸೋಲು

ಇಂದು 2ನೇ ಏಕದಿನ ಪಂದ್ಯವನ್ನು ಸೋಲುವುದರೊಂದಿಗೆ ಭಾರತ ಸತತ 7ನೇ ಪಂದ್ಯದಲ್ಲಿ ಮುಗ್ಗರಿಸಿದೆ. ಸತತ ಎರಡನೇ ಬಾರಿ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ಭಾರತ ವಿರುದ್ಧ ಗರಿಷ್ಠ ಮೊತ್ತ(389/4)ಗಳಿಸಿರುವ ಸಾಧನೆ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News